Shivamogga | Shivamogga: Illegal sand mining in Tungabhadra River – AC Tahsildar launch surprise raid! shimoga | ಶಿವಮೊಗ್ಗ : ತುಂಗಾಭದ್ರ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ – ಎಸಿ ತಹಶೀಲ್ದಾರ್ ದಿಢೀರ್ ದಾಳಿ!

shimoga | ಶಿವಮೊಗ್ಗ : ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ – ಎಸಿ, ತಹಶೀಲ್ದಾರ್ ದಿಢೀರ್ ದಾಳಿ!

ಶಿವಮೊಗ್ಗ (shivamogga), ಏ. 6: ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ, ವಿವಿಧ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದ ಘಟನೆ ಏ. 5 ರಂದು ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರಿಯಾ, ಉಪ ತಹಶೀಲ್ದಾರ್ ಚಂದ್ರಶೇಖರ್, ರೆವಿನ್ಯೂ ಇನ್ಸ್’ಪೆಕ್ಟರ್ ಸತೀಶ್, ಗ್ರಾಮ ಆಡಳಿತಾಧಿಕಾರಿ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ದಾಳಿಯ ವೇಳೆ ಸ್ಥಳದಲ್ಲಿ ದಾಸ್ತಾನು ಮಾಡಿದ್ದ ಸರಿಸುಮಾರು 20 ಮೆಟ್ರಿಕ್ ಟನ್ ಮರಳು, ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಪೈಪ್ ಮತ್ತೀತರ ವಸ್ತುಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.

ಅಧಿಕಾರಿಗಳ ತಂಡದ ದಾಳಿಯ ಮಾಹಿತಿ ಅರಿತ ಮರಳು ದಂಧೆಕೋರರು ವಾಹನಗಳ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shivamogga, Apr. 6: A team of officials from various departments conducted a surprise raid on a place where illegal sand mining was taking place in the Tungabhadra river. The incident took place on Apr. 5 in Hadonahalli village of Shivamogga taluk.

The operation was conducted under the leadership of Deputy Divisional Officer Satyanarayana and Tahsildar VS Rajiv. Mines and Geology Department Officer Priya, Deputy Tahsildar Chandrashekhar, Revenue Inspector Satish, Village Administrator Shetty and others were present during the operation.

shimoga | Shimoga: Heavy rain is forecast to continue! shimoga | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ! Previous post shimoga rain alert | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!
shimoga | Disruption in drinking water supply in various places in Shivamogga city on April 7: What is the reason? shimoga | ಶಿವಮೊಗ್ಗ ನಗರದ ವಿವಿಧೆಡೆ ಏ. 7 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಕಾರಣವೇನು? Next post shimoga | ಶಿವಮೊಗ್ಗ ನಗರದ ವಿವಿಧೆಡೆ ಏ. 7 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಕಾರಣವೇನು?