shimoga | Disruption in drinking water supply in various places in Shivamogga city on April 7: What is the reason? shimoga | ಶಿವಮೊಗ್ಗ ನಗರದ ವಿವಿಧೆಡೆ ಏ. 7 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಕಾರಣವೇನು?

shimoga | ಶಿವಮೊಗ್ಗ ನಗರದ ವಿವಿಧೆಡೆ ಏ. 7 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಕಾರಣವೇನು?

ಶಿವಮೊಗ್ಗ (shivamogga), ಏ. 6: ನಗರದ ಕೆ ಆರ್ ವಾಟರ್ ವರ್ಕ್ಸ್ ನಿಂದ  ಕುಡಿಯುವ ನೀರು ಪೂರೈಕೆಯಾಗುವ ಮುಖ್ಯ ಪೈಪ್ ಲೈನ್ (ಏರು ಕೊಳವೆ ಮಾರ್ಗ) ದುರಸ್ತಿಯಾಗಿರುವ ಕಾರಣದಿಂದ, ಏ. 7 ರ ಸೋಮವಾರ ನಗರದ ಕೆಲ ಬಡಾವಣೆಗಳ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಎಂಜಿನಿಯರ್ ಜೀವನ್ ಅವರು ತಿಳಿಸಿದ್ದಾರೆ.

ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಸುವವರು, ಭಾನುವಾರ ಮಂಡ್ಲಿಯ ಬಳಿ ಹಾದು ಹೋಗಿರುವ ನಗರದ ವಿವಿಧೆಡೆ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಗೆ ಹಾನಿ ಮಾಡಿದ್ದಾರೆ. ಸದರಿ ಪೈಪ್ ಲೈನ್ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಪೈಪ್ ಲೈನ್ ದುರಸ್ತಿ ಕಾರಣದಿಂದ ತುಂಗಾನಗರ, ಮಿಳಘಟ್ಟ ಬಸ್ ಸ್ಟ್ಯಾಂಡ್, ಜಿಲ್ಲಾ ಪಂಚಾಯ್ತಿ ಕಚೇರಿ, ನೆಹರು ಕ್ರೀಡಾಂಗಣ, ರವೀಂದ್ರ ನಗರ ಮತ್ತು ಮಂದಾರ ಶಾಲೆಯ ಸಮೀಪದ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಈ ಕಾರಣದಿಂದ ಸದರಿ ಓವರ್ ಹೆಡ್ ಟ್ಯಾಂಕ್ ಗಳಿಂದ ನೀರು ಪೂರೈಕೆಯಾಗುವ ಬಡಾವಣೆಗಳಿಗೆ ಏ. 7 ರ ಸೋಮವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಾಗರೀಕರು ಸಹಕರಿಸುವಂತೆ ಎಂಜಿನಿಯರ್ ಜೀವನ್ ಅವರು ಮಾಹಿತಿ ನೀಡಿದ್ದಾರೆ.

Shivamogga, Apr. 6: Due to repairs to the main pipeline that supplies drinking water from the city’s KR Water Works, there will be disruptions in the drinking water supply to some areas of the city on Monday, April 7, Water Board Engineer Jeevan said.

Workers installing a gas pipeline damaged a pipeline that supplies water to overhead tanks in various parts of the city near Mandli on Sunday. The pipeline has been repaired.

Due to pipeline repairs, there will be disruption in water supply to overhead tanks near Tunganagar, Milaghatta bus stand, Zilla Panchayat office, Nehru Stadium, Ravindra Nagar and Mandara School.

Due to this, there will be a disruption in water supply to the areas supplied with water from the said overhead tanks on Monday, April 7. Engineer Jeevan has informed the citizens to cooperate.

Shivamogga | Shivamogga: Illegal sand mining in Tungabhadra River – AC Tahsildar launch surprise raid! shimoga | ಶಿವಮೊಗ್ಗ : ತುಂಗಾಭದ್ರ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ – ಎಸಿ ತಹಶೀಲ್ದಾರ್ ದಿಢೀರ್ ದಾಳಿ! Previous post shimoga | ಶಿವಮೊಗ್ಗ : ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ – ಎಸಿ, ತಹಶೀಲ್ದಾರ್ ದಿಢೀರ್ ದಾಳಿ!
Bhadravati: Five children mysteriously disappeared happy ending – where were they found? bhadravati | ಭದ್ರಾವತಿ : ಐವರು ಮಕ್ಕಳು ನಿಗೂಢ ನಾಪತ್ತೆ ಪ್ರಕರಣ ಸುಖಾಂತ್ಯ – ಪತ್ತೆಯಾಗಿದ್ದೆಲ್ಲಿ? Next post bhadravati | ಭದ್ರಾವತಿ : ಐವರು ಮಕ್ಕಳ ನಿಗೂಢ ನಾಪತ್ತೆ ಪ್ರಕರಣ ಸುಖಾಂತ್ಯ – ಪತ್ತೆಯಾಗಿದ್ದೆಲ್ಲಿ?