DCC Bank scam: ED raids various places in Shivamogga, Bengaluru! shimoga dcc bank | ಡಿಸಿಸಿ ಬ್ಯಾಂಕ್ ಹಗರಣ : ಶಿವಮೊಗ್ಗ, ಬೆಂಗಳೂರಿನ ವಿವಿಧೆಡೆ ಇಡಿ ದಾಳಿ!

shimoga dcc bank | ಡಿಸಿಸಿ ಬ್ಯಾಂಕ್ ಹಗರಣ : ಶಿವಮೊಗ್ಗ, ಬೆಂಗಳೂರಿನ ವಿವಿಧೆಡೆ ಇಡಿ ದಾಳಿ!

ಶಿವಮೊಗ್ಗ (shivamogga), ಏ. 8: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿದ್ದ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿದಂತೆ, ಏ. 8 ರಂದು ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧೆಡೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಪ್ರತ್ಯೇಕ ತಂಡಗಳು, ದಿಢೀರ್ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ದಾಳಿ ಕುರಿತಂತೆ ಇಡಿ ಸಂಸ್ಥೆಯಿಂದ ಇನ್ನಷ್ಟೆ ಅಧಿಕೃತ ವಿವರಗಳು ಲಭ್ಯವಾಗಬೇಕಾಗಿದೆ. ಲಭ್ಯ ಮಾಹಿತಿ ಅನುಸಾರ ಶಿವಮೊಗ್ಗ ನಗರದ ಗೋಪಾಳಗೌಡ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನಗರ ಶಾಖೆಯ ಮಾಜಿ ಮ್ಯಾನೇಜರ್ ಶೋಭಾ,

ಈ ಹಿಂದೆ ಬ್ಯಾಂಕ್ ವಾಹನ ಚಾಲಕರಾಗಿದ್ದ ಶಿವಕುಮಾರ್ ಅವರ ಕಾಮಾಕ್ಷಿ ಬೀದಿಯಲ್ಲಿರುವ ನಿವಾಸ,  ಭದ್ರಾವತಿಯಲ್ಲಿನ ಸಿಬ್ಬಂದಿಯೋರ್ವರ ನಿವಾಸ, ಬಿ ಹೆಚ್ ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆ ಮೇಲೆ ಇಡಿಯ ಪ್ರತ್ಯೇಕ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ ಅಪೆಕ್ಸ್ ಬ್ಯಾಂಕ್ ಕಚೇರಿ ಸೇರಿದಂತೆ ವಿವಿಧೆಡೆ ಇಡಿ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥಗೌಡ ಅವರನ್ನು, ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ಹೇಳಲಾಗಿದೆ.

2023 ರಲ್ಲಿಯೂ ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿದಂತೆ, ಇಡಿ ತಂಡ ಆರ್ ಎಂ ಮಂಜುನಾಥಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿರುವ ನಿವಾಸಗಳು ಸೇರಿದಂತೆ ವಿವಿಧೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿತ್ತು.

ಏನೀದು ಪ್ರಕರಣ? : 2014 ರಲ್ಲಿ ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆಯಲ್ಲಿ ನಕಲಿ ಗೋಲ್ಡ್ ಲೋನ್ ಹಗರಣ ಬೆಳಕಿಗೆ ಬಂದಿತ್ತು. ನಕಲಿ ಬಂಗಾರಗಳನ್ನು ಅಡಮಾನವಿಟ್ಟು ಕೋಟ್ಯಾಂತರ ರೂ.  ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈ ಕುರಿತಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಅಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್ ಎಂ ಮಂಜುನಾಥ ಗೌಡ, ಬ್ಯಾಂಕ್ ಶಾಖೆಯ ಮ್ಯಾನೇಜರ್ ಶೋಭಾ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೊಪ್ಪಿಸಿತ್ತು. ಮಂಜುನಾಥಗೌಡರನ್ನು ಆರೋಪಮುಕ್ತಗೊಳಿಸಲಾಗಿತ್ತು.

ಇದೆಲ್ಲದರ ನಡುವೆ ಇಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಇಡಿ ತನಿಖೆ ವಿರುದ್ದ ಮಂಜುನಾಥಗೌಡ ಅವರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಇಡಿ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು.

Shivamogga, Apr. 8: In connection with the fake gold scam that took place at the Shivamogga DCC Bank city branch, separate teams of Enforcement Directorate (ED) officers are conducting surprise raids and inspecting documents at various places in Shivamogga and Bengaluru on Apr. 8.

On the other hand, it is said that ED is conducting inspections at various places in Bengaluru, including the Apex Bank office. Similarly, it is said that the ED officials have questioned the president of Shivamogga DCC Bank R M Manjunatha Gowda in Bengaluru. #shimogadccbank, #shimogadccbankscam, #EDraidinshimoga,

shivamogga | Details of vegetable prices on April 18 in the Shivamogga APMC wholesale market Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 8 ರ ತರಕಾರಿ ಬೆಲೆಗಳ ವಿವರ
haveri news | Haveri Genius Academy head Usharani honoured with achievement award haveri news | ಹಾವೇರಿಯ ಜೀನಿಯಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ Next post haveri news | ಹಾವೇರಿಯ A2 ಜೀನಿಯಸ್ ಅಬಾಕಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ