haveri news | Haveri Genius Academy head Usharani honoured with achievement award haveri news | ಹಾವೇರಿಯ ಜೀನಿಯಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ

haveri news | ಹಾವೇರಿಯ A2 ಜೀನಿಯಸ್ ಅಬಾಕಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ

ಹಾವೇರಿ (haveri), ಏ. 8 : ಹಾವೇರಿಯ ಶಿವಾಜಿನಗರದಲ್ಲಿರುವ A2 ಜೀನಿಯಸ್ ಅಬಾಕಸ್ ಅಕಾಡೆಮಿ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಉಷಾರಾಣಿ ಜಿ ಎಸ್ ಅವರು ಅಬಾಕಸ್ ಕ್ಷೇತ್ರದಲ್ಲಿನ ಸಾಧನೆಗಾಗಿ, ಕರ್ನಾಟಕ ಅಚೀವರ್ಸ್ ಬುಕ್ಸ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕ ಅಚೀವರ್ಸ್ ಬುಕ್ಸ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಸಾಧಕರ ವಿಭಾಗದಲ್ಲಿ ನೀಡುವ ‘ನ್ಯಾಷನಲ್ ರೆಕಾರ್ಡ್ಸ್ ಹೋಲ್ಡರ್’ ಗೌರವಕ್ಕೆ ಉಷಾರಾಣಿ ಜಿ ಎಸ್ ಅವರು ಪಾತ್ರರಾಗಿದ್ದಾರೆ.

ಏ. 6 ರಂದು ಸಂಸ್ಥೆಯು ಹಾವೇರಿಯಲ್ಲಿರುವ ಜೀನಿಯಸ್ ಅಕಾಡೆಮಿಗೆ ಭೇಟಿ ನೀಡಿತ್ತು. ಅಕಾಡೆಮಿಯಲ್ಲಿ ಕಲಿಯುತ್ತಿರುವ 34 ಮಕ್ಕಳ ಅಬಾಕಸ್ ಕಲಿಕೆ ಗುಣಮಟ್ಟದ ಪರೀಕ್ಷೆ ನಡೆಸಿತ್ತು. ಕೇವಲ10 ನಿಮಿಷದಲ್ಲಿ ಎರಡಂಕಿ ಹಾಗೂ ಮೂರಂಕಿಯ ಸಂಕಲನ ಮತ್ತು ವ್ಯವಕಲನ ಲೆಕ್ಕಗಳನ್ನು ಮೌಖಿಕವಾಗಿ ಮಾಡಿ, ಸದರಿ ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ತೇರ್ಗಡೆ ಹೊಂದಿದ್ದರು.

ಈ ಹಿನ್ನೆಲೆಯಲ್ಲಿ ಅಕಾಡೆಮಿ ಮುಖ್ಯಸ್ಥರೂ ಹಾಗೂ ತರಬೇತುದಾರರಾದ ಉಷಾರಾಣಿ ಜಿ ಎಸ್ ಅವರಿಗೆ ಸಾಧಕ ಪ್ರಶಸ್ತಿ ನೀಡಿ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

ಕರ್ನಾಟಕ ಅಚೀವರ್ಸ್ ಬುಕ್ಸ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಂಬಿಕಾ ಹಂಚಾಟೆ ಉಪಸ್ಥಿತಿಯಲ್ಲಿ ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಕಾಕ್ ನ ಅಜಿತ್ ಬಾನೆ ಪ್ರೈಮರಿ ಹಾಗೂ ನ್ಯೂ ಹೈಸ್ಕೂಲ್ ನ ಪ್ರಾಂಶುಪಾಲರಾದ ಡಾ. ಲಕ್ಷ್ಮಣ್ ಚೌರಿ, ಸಮ್ರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಕಿರಣ್ ಜತ್ತಿ ಹಾಜರಿದ್ದರು.

ಸಂತಸ : ‘ಕರ್ನಾಟಕ ಅಚೀವರ್ಸ್ ಬುಕ್ಸ್ ಆಫ್ ರೆಕಾರ್ಡ್ಸ್ ಸಂಸ್ಥೆಯು ರಾಷ್ಟ್ರೀಯ ದಾಖಲೆಯಲ್ಲಿ ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸ ಉಂಟು ಮಾಡಿದೆ. ಸದರಿ ಸಂಸ್ಥೆಯೇ ತಮಗೆ ‘ಅತ್ಯುತ್ತಮ ಅಬಾಕಸ್ ತರಬೇತುದಾರರು ಹಾಗೂ ಸಂಪನ್ಮೂಲ ವ್ಯಕ್ತಿ’ಗಳೆಂದು ಗುರುತಿಸಿ ಪ್ರಮಾಣಪತ್ರ ನೀಡಿದೆ. ಇದು ತಮಗೆ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರೇಪಣೆಯಾಗಿದೆ’ ಎಂದು ಉಷಾರಾಣಿ ಜಿ ಎಸ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Haveri, Apr. 8: Usharani G. S., head and trainer of A2 Genius Abacus Academy in Shivajinagar, Haveri, has been honoured with an award by the Karnataka Achievers Books of Records for her achievements in the field of abacus. Usharani G.S. has been awarded the ‘National Records Holder’ honor in the achievers category by the Karnataka Achievers Books of Records.

DCC Bank scam: ED raids various places in Shivamogga, Bengaluru! shimoga dcc bank | ಡಿಸಿಸಿ ಬ್ಯಾಂಕ್ ಹಗರಣ : ಶಿವಮೊಗ್ಗ, ಬೆಂಗಳೂರಿನ ವಿವಿಧೆಡೆ ಇಡಿ ದಾಳಿ! Previous post shimoga dcc bank | ಡಿಸಿಸಿ ಬ್ಯಾಂಕ್ ಹಗರಣ : ಶಿವಮೊಗ್ಗ, ಬೆಂಗಳೂರಿನ ವಿವಿಧೆಡೆ ಇಡಿ ದಾಳಿ!
Sagar | Revenue Inspector caught in Lokayukta trap while accepting bribe! sagar | ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್’ಪೆಕ್ಟರ್! Next post sagara | ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್’ಪೆಕ್ಟರ್!