Sagar | Revenue Inspector caught in Lokayukta trap while accepting bribe! sagar | ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್’ಪೆಕ್ಟರ್!

sagara | ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್’ಪೆಕ್ಟರ್!

ಸಾಗರ (sagara), ಏ. 8: ರೈತರೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್’ಪೆಕ್ಟರ್ (ಕಂದಾಯ ನಿರೀಕ್ಷಕ) ಓರ್ವರನ್ನು, ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ ಏ. 8 ರಂದು ಸಾಗರ ತಾಲೂಕಿನ ಶಿರೂರು ಆಲಳ್ಳಿಯಲ್ಲಿ ನಡೆದಿದೆ.

ತಾಳಗುಪ್ಪ ಹೋಬಳಿ ರೆವಿನ್ಯೂ ಇನ್ಸ್’ಪೆಕ್ಟರ್ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ : ತಾಳಗುಪ್ಪ ಹೋಬಳಿ ಶಿರೂರು ಗ್ರಾಮದ ರೈತ ಮಂಡಿಗೆಹಳ್ಳದ ಕೃಷ್ಣಮೂರ್ತಿ ಎಂಬುವರು, ಉಬ್ಬು – ತಗ್ಗುಗಳಿಂದ ಕೂಡಿರುವ ತಮ್ಮ ಜಮೀನು ಸಮತಟ್ಟುಗೊಳಿಸಲು ಅನುಮತಿ ನೀಡುವಂತೆ ಸಾಗರ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುಮತಿ ಸಿಕ್ಕಿರಲಿಲ್ಲ.

ಇತ್ತೀಚೆಗೆ ಕಾರ್ಮಿಕರ ಮೂಲಕ ಜಮೀನು ಸಮತಟ್ಟುಗೊಳಿಸುವ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ್ದ ಮಂಜುನಾಥ್ ಕೆಲಸ ನಿಲ್ಲಿಸುವಂತೆ ಸೂಚಿಸಿ, ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಪೋನ್ ಪೇ ಮೂಲಕ 2500 ರೂ. ಪಡೆದುಕೊಂಡಿದ್ದರು.

ನಂತರ ಮತ್ತೆ 3000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ರೈತ ಕೃಷ್ಣಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಮಧ್ಯಾಹ್ನ ಶಿರೂರು ಆಲಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ರೈತನಿಂದ 3 ಸಾವಿರ ರೂ. ಲಂಚ ಪಡೆಯುವ ವೇಳೆ, ರೆವಿನ್ಯೂ ಇನ್ಸ್’ಪೆಕ್ಟರ್ ಮಂಜುನಾಥ್ ರನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

Sagara, Apr. 8: An incident in which a Revenue Inspector of the Revenue Department was arrested along with the bribe money by the Lokayukta police, who was accepting a bribe from a farmer, took place on Apr. 8 in Shirur Alalli, Sagar taluk.

haveri news | Haveri Genius Academy head Usharani honoured with achievement award haveri news | ಹಾವೇರಿಯ ಜೀನಿಯಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ Previous post haveri news | ಹಾವೇರಿಯ A2 ಜೀನಿಯಸ್ ಅಬಾಕಸ್ ಅಕಾಡೆಮಿ ಮುಖ್ಯಸ್ಥೆ ಉಷಾರಾಣಿಗೆ ಸಾಧಕ ಪ್ರಶಸ್ತಿ ಗೌರವ
shivamogga | Details of vegetable prices on April 18 in the Shivamogga APMC wholesale market Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 9 ರ ತರಕಾರಿ ಬೆಲೆಗಳ ವಿವರ