ಪೊಲೀಸ್ ಧ್ವಜ ದಿನಾಚರಣೆಯ ಹಿನ್ನೆಲೆ… ಕರ್ನಾಟಕ ಪೊಲೀಸ್ ಕಾಯ್ದೆ-1963 ಅಸ್ತಿತ್ವಕ್ಕೆ ಬಂದ ನಂತರ, 2-4-1965 ರಂದು ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನುರೂಪಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಪೊಲೀಸ್ ಇಲಾಖೆಯಲ್ಲಿ ನಿವೃತ್ತರಾದ ಅಧಿಕಾರಿ/ಸಿಬ್ಬಂದಿಗಳ ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಲಾಗುತ್ತದೆ.

‘ಪೊಲೀಸ್ ನಿಧಿಯಿಂದ ನೆರವಿನಹಸ್ತ’ : ಎಸ್ಪಿ ಜಿ.ಕೆ.ಮಿಥುನ್ ಕುಮಾರ್

ಶಿವಮೊಗ್ಗ, ಏ. 2: ಪೊಲೀಸ್ ನಿಧಿಯಿಂದ ಜಿಲ್ಲೆಯಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಪೊಲೀಸ್ ಇಲಾಖೆಗೆ ಸೇರಿದ 66 ಜನರಿಗೆ 2 ಲಕ್ಷಕ್ಕೂ ಹೆಚ್ಚಿನ ಧನ ಸಹಾಯದ ನೆರವು ಕಲ್ಪಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪೊಲೀಸ್ ಇಲಾಖೆವತಿಯಿಂದ ಶಿವಮೊಗ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ, ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೃತಪಟ್ಟ ನೌಕರರ ಕುಟುಂಬಗಳಿಗೆ 1.30 ಲಕ್ಷ ರೂ. ನೀಡಲಾಗಿದೆ. ಹಾಗೆಯೇ ಪೊಲೀಸ್ ಕುಟುಂಬಗಳ ಕಲ್ಯಾಣ ಕಾರ್ಯಕ್ರಮಗಳ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿಸ್ತು ಮುಖ್ಯ: ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಎ.ಎಸ್.ಐ. ದಾನಂ ಅವರು ಮಾತನಾಡಿ, ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿ ಅಧಿಕಾರಿ ಸಿಬ್ಬಂಧಿಗಳು, ತಮ್ಮಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯರಿತು ಸದಾ ಎಚ್ಚರಿಕೆಯಿಂದಿದ್ದು ಕಾರ್ಯನಿರ್ವಹಿಸಬೇಕು ಎಂದರು.

ನನ್ನ ಸೇವೆಯನ್ನು ಗುರುತಿಸಿ ಇಲಾಖೆಯ ಹಿರಿಯ ಅಧಿಕಾರಿಗಳು ಅನೇಕ ಮಹತ್ವದ ಜವಾಬ್ದಾರಿಗಳನ್ನು ನೀಡಿದರು. ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದಿಂದ ಸಹ ಸಿಬ್ಬಂದಿಗಳ ಸಹಕಾರದಿಂದ ನಿರ್ವಹಿಸಿದ ಕಾರ್ಯಗಳಿಗಾಗಿ ಹಲವು ಪುರಸ್ಕಾರ ಲಭಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಸಿಬ್ಬಂಧಿಗಳು ಕರ್ತವ್ಯದಲ್ಲಿ ನಿಷ್ಠೆ, ಶಿಸ್ತು , ಬದ್ಧತೆಯೊಂಡಿಗೆ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ  ಅವರು, ಅಗತ್ಯವಿರುವ ಸಿಬ್ಬಂಧಿಗಳು ಸೂಕ್ತ ತರಬೇತಿ ಪಡೆದು ಮುಂದುವರೆಯುವಂತೆ ಸಲಹೆ ನೀಡಿದರು.

ಉತ್ತಮವಾಗಿ ಸೇವೆ ಸಲ್ಲಿಸಿ. ಸಮಯ ಪಾಲನೆ ಮಾಡಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿ. ಮಾಡುವ ಕಾರ್ಯ ನೆನಪಿನಲ್ಲಿ ಉಳಿಯುವಂತಾಗಲಿ. ವಿಶೇಷವಾಗಿ ಜನರಲ್ಲಿ ವಾಹನ ಚಾಲನೆ, ಸಂಚಾರಿ ನಿಯಮಗಳ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲಕುಮಾರ ಭೂಮಾರಡ್ಡಿ ಉಪಸ್ಥಿತರಿದ್ದರು. ಆರ್.ಪಿ.ಐ. ಶಿವಾನಂದ ಗುಣದಾಳ್ ಅವರು ಪರೇಡ್ ಕಮಾಂಡರ್ ಆಗಿ  ನೇತೃತ್ವವನ್ನು ವಹಿಸಿದ್ದರು.

ಪೊಲೀಸ್ ಧ್ವಜ ದಿನಾಚರಣೆ ಹಿನ್ನೆಲೆ

ಕರ್ನಾಟಕ ಪೊಲೀಸ್ ಕಾಯ್ದೆ-1963 ಅಸ್ತಿತ್ವಕ್ಕೆ ಬಂದ ನಂತರ, 2-4-1965 ರಂದು ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನುರೂಪಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.

ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ್‌ ಧ್ವಜ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಪೊಲೀಸ್‌ ಇಲಾಖೆಯಲ್ಲಿ ನಿವೃತ್ತರಾದ ಅಧಿಕಾರಿ/ಸಿಬ್ಬಂದಿಗಳ ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಲಾಗುತ್ತದೆ.

‘ನೆನಪಿನಲ್ಲಿ ಉಳಿಯುವ ಕೆಲಸ ಮಾಡಿ’

**** ಉತ್ತಮವಾಗಿ ಸೇವೆ ಸಲ್ಲಿಸಿ. ಸಮಯ ಪಾಲನೆ ಮಾಡಿ. ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿ.  ನೆನಪಿನಲ್ಲಿ ಉಳಿಯುವಂತಹ ಉತ್ತಮ ಕಾರ್ಯ ಮಾಡಿ. ವಿಶೇಷವಾಗಿ ಜನರಲ್ಲಿ ವಾಹನ ಚಾಲನೆ, ಸಂಚಾರಿ ನಿಯಮಗಳ ಅರಿವು ಮೂಡಿಸಬೇಕಾದ ಅಗತ್ಯವಿದೆ’ ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದ ನಿವೃತ್ತ ಎ.ಎಸ್.ಐ. ದಾನಂ ಅವರು ತಮ್ಮ ಭಾಷಣದಲ್ಲಿ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಸಲಹೆ ನೀಡಿದರು.

#ಕರ್ನಾಟಕವಿಧಾನಸಭೆ ಚುನಾವಣೆ2023 #ಕರ್ನಾಟಕವಿಧಾನಸಭೆಎಲೆಕ್ಷನ್, #ಕರ್ನಾಟಕವಿಧಾನಸಭೆ, #ವಿಧಾನಸಭೆಚುನಾವಣೆ, #ಅಸೆಂಬ್ಲಿಎಲೆಕ್ಷನ್, #ಕರ್ನಾಟಕವಿಧಾನಸಭೆಚುನಾವಣೆಗೆವೇಳಾಪಟ್ಟಿಪ್ರಕಟ, #ಅಸೆಂಬ್ಲಿಎಲೆಕ್ಷನ್, #ವಿಧಾನಸಭೆಚುನಾವಣೆ, #ಚುನಾವಣಾವೇಳಾಪಟ್ಟಿ, Previous post ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಡಿಸಿ ನೀಡಿದ ಸೂಚನೆಯೇನು?
ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಏ. 3 ರಂದು ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ! Next post ಬಿಜೆಪಿಯಲ್ಲಿ ಇರ್ತಾರಾ? ಕಾಂಗ್ರೆಸ್’ಗೆ ಹೋಗ್ತಾರಾ?