Thirthahalli DCC Bank employee dies in accident: Four injured! thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!

thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!

ತೀರ್ಥಹಳ್ಳಿ (thirthahalli), ಏ. 10: ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಬಳಿ ಏ. 10 ರ ಮುಂಜಾನೆ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯ ಕ್ಯಾಷಿಯರ್ ಶಾಶ್ವತ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಕೊಂಡ್ಲುರು ಸಮೀಪದ ನೇರಳಮನೆಯ ನಿವಾಸಿಯಾಗಿದ್ಧಾರೆ ಎಂದು ತಿಳಿದುಬಂದಿದೆ.

ಮುಂಜಾನೆ 2 ರಿಂದ 2.30 ರ ನಡುವೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಗಾಯಾಳುಗಳನ್ನು ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕ್ಯಾಷಿಯರ್ ಶಾಶ್ವತ್ ಇದ್ದ ಮಾರುತಿ ಸುಜುಕಿ ಎಸ್ಟಿಮೋ ಕಾರು ಆಗುಂಬೆ ಕಡೆಯಿಂದ ತೀರ್ಥಹಳ್ಳಿಯೆಡೆಗೆ ಹಾಗೂ ಬೊಲೆರೋ ಕಾರು ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಶ್ವತ್ ಇದ್ದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಬೊಲೆರೋ ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Thirthahalli, Apr. 10: One person died on the spot and four others were seriously injured in a head-on collision between two cars near Shivarajpura in Thirthahalli taluk on the morning of Apr. 10. The deceased has been identified as Shashwat (30), a cashier at the DCC Bank branch in Thirthahalli town. He is a resident of Neralmane near Kondluru. #dccbank #dccbankemployee, #thirthahallidccbank,

shivamogga | Details of vegetable prices on April 18 in the Shivamogga APMC wholesale market Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 10 ರ ತರಕಾರಿ ಬೆಲೆಗಳ ವಿವರ
When will the Sigandur Bridge be inaugurated? What did MP BY Raghavendra say? hosanagara | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಬಿ ವೈ ರಾಘವೇಂದ್ರ ಹೇಳಿದ್ದೇನು? Next post hosanagara | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಬಿ ವೈ ರಾಘವೇಂದ್ರ ಹೇಳಿದ್ದೇನು?