
bhadravati | ಭದ್ರಾವತಿ : ಮನೆಯಿಂದ ಹೊರಹೋದ ಮಹಿಳೆ ಕಣ್ಮರೆ!
ಭದ್ರಾವತಿ (bhadravathi), ಏ. 11: ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾರೂಢನಗರದಲ್ಲಿ ಮನೆಯಿಂದ ಹೊರ ತೆರಳಿದ ಮಹಿಳೆಯೋರ್ವರು, ಮನೆಗೆ ಹಿಂದಿರುಗದೆ ಕಣ್ಮರೆಯಾಗಿರುವ ಘಟನೆ ನಡೆದಿದೆ.
ಈ ಕುರಿತಂತೆ ಏ. 11 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಬಿ. ಎಸ್. ನವೀನ್‌ಕುಮಾರ್ ಎಂಬುವವರ ತಾಯಿ ಲಲಿತಮ್ಮ (70) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಏ. 08 ರಂದು ಇವರು ಮನೆಯಿಂದ ಹೊರ ತೆರಳಿದ್ದು, ನಂತರ ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.
ಲಲಿತಮ್ಮರವರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಹಣೆಯ ಮೇಲೆ ಸಾಸಿವೆ ಕಾಳು ಗಾತ್ರದ 3 ಕಪ್ಪು ಮಚ್ಚೆ ಇರುತ್ತದೆ. ನಾಪತ್ತೆಯಾದ ವೇಳೆ ಬಿಳಿ ಹೂವಿನ ಕೆಂಪು ಬಣ್ಣದ ನೈಟಿ ಧರಿಸಿದ್ದರು. ಕೈಯಲ್ಲಿ ನಾಲ್ಕು ಕಾಲಿನ ಸಿಲ್ವರ್ ವಾಕಿಂಟ್ ಸ್ಟಿಕ್ ಇರುತ್ತದೆ.
ಸದರಿ ಮಹಿಳೆಯ ಕುರಿತಂತೆ ಮಾಹಿತಿ ಲಭ್ಯವಾದಲ್ಲಿ, ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Bhadravathi, Apr. 11: An incident has occurred in Siddharudnagar under the jurisdiction of Bhadravathi old town police station where a woman went out of her house and disappeared without returning home. #bhadravati, #bhadravatinews, #bhadravatinewsupdate,