ಭದ್ರಾವತಿ, ಏ. 12: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಭದ್ರಾವತಿ ರಸ್ತೆಯ ಸಂತೋಷ್ ರೈಸ್ ಮಿಲ್ ಸಮೀಪ ಕಳೆದ ಗುರುವಾರ ರಾತ್ರಿ ನಡೆದಿದೆ.

bhadravati | ಹೊಳೆಹೊನ್ನೂರು : ಲಾರಿ, ಬೈಕ್ ನಡುವೆ ಡಿಕ್ಕಿ – ಯುವಕ ಸಾವು!

ಭದ್ರಾವತಿ, ಏ. 12: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಭದ್ರಾವತಿ ರಸ್ತೆಯ ಸಂತೋಷ್ ರೈಸ್ ಮಿಲ್ ಸಮೀಪ ಕಳೆದ ಗುರುವಾರ ರಾತ್ರಿ ನಡೆದಿದೆ.

ಮಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿ ವಿನುತ್ ಘೋರ್ಪಡೆ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ಭದ್ರಾವತಿ ತಾಲೂಕಿನ ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ ಅವರ ಮೊಮ್ಮಗನಾಗಿದ್ದಾನೆ.

ಭದ್ರಾವತಿಯ ಖಾಸಗಿ ನರ್ಸಿಂಗ್ ಆಸ್ಪತ್ರೆಯಲ್ಲಿ ಯುವಕ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಮಾರಶೆಟ್ಟಿಹಳ್ಳಿಗೆ ಹಿಂದಿರುಗುವಾಗ ಅವಘಡ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bhadravati, April 12: A biker died in an accident between a lorry and a bike on Thursday night near Santosh Rice Mill on Bhadravati Road near Holehonnur. The seriously injured youth was admitted to the government-run Meggan Hospital in Shivamogga. Later, he was admitted to a private hospital for further treatment. A case has been registered at the Holehonnur police station in this regard.

sagar | ಸಾಗರ : ಶರಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು! Sagar: Man dies after drowning in Sharavathi river backwaters! Previous post sagara | ಸಾಗರ : ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು!
shimoga rain | Heavy rain with thunderstorms in many places of Shimoga city and taluk! Next post shimoga rain | ಶಿವಮೊಗ್ಗ ನಗರ, ತಾಲೂಕಿನ ಹಲವೆಡೆ ಗುಡುಗು – ಬಿರುಗಾಳಿ ಸಹಿತ ಭಾರೀ ಮಳೆ!