
shimoga rain | ಶಿವಮೊಗ್ಗ ನಗರ, ತಾಲೂಕಿನ ಹಲವೆಡೆ ಗುಡುಗು – ಬಿರುಗಾಳಿ ಸಹಿತ ಭಾರೀ ಮಳೆ!
ಶಿವಮೊಗ್ಗ (shivamogga), ಏ. 12: ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಏ.12 ರ ಸಂಜೆ ಗುಡುಗು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಯಿತು. ಇದರಿಂದ ಬೇಸಿಗೆ ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಭೂಮಿಯು ತಂಪಾಯಿತು!
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಬಿದ್ದ ಭಾರೀ ಮಳೆಯಿಂದ ನಗರದ ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ ವಾಹನ ಸಂಚಾರ ಅಸ್ತವ್ಯಸ್ತವಾಗುವಂತಾಗಿತ್ತು.
ಶನಿವಾರ ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ಬಿದ್ದ ಮಳೆಯು ಪ್ರಸ್ತುತ ವರ್ಷದಲ್ಲಿ ಬಿದ್ದ ಅತೀ ಹೆಚ್ಚು ಮಳೆಯಾಗಿದೆ.
ಪ್ರಸ್ತುತ ಬೇಸಿಗೆಯಲ್ಲಿ ಶಿವಮೊಗ್ಗ ನಗರ ಹಾಗೂ ತಾಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಿತ್ತು. ಆದರೆ ಶನಿವಾರ ಸಂಜೆ ವಿವಿಧೆಡೆ ಬಿದ್ದ ಮಳೆಯು, ಕೊರತೆ ನೀಗಿಸುವಂತೆ ಮಾಡಿದೆ.
ಕೂಲ್ ಕೂಲ್ : ರಣ ಬಿಸಿಲಿಗೆ ಶಿವಮೊಗ್ಗ ನಗರದ ನಾಗರೀಕರು ಅಕ್ಷರಶ: ತತ್ತರಿಸಿ ಹೋಗಿದ್ದರು. ಶನಿವಾರ ಸಂಜೆ ಬಿದ್ದ ಧಾರಾಕಾರ ಮಳೆಯಿಂದ ಇಡೀ ನಗರ ತಂಪಾಗುವಂತಾಯಿತು. ನಾಗರೀಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
Shivamogga, Apr. 12: Heavy rain accompanied by thunder, lightning and hail lashed many places in Shivamogga city and taluk on the evening of Apr. 12. This cooled the land, which was scorched by the summer sun!
#shimogarain, #shimogarain, #rainalert, #ಮಳೆ, #ಶಿವಮೊಗ್ಗ, #shimogarainalert, #ಮಳೆಮುನ್ಸೂಚನೆ, #ಮಳೆಅಲರ್ಟ್,