
shimoga | ಶಿವಮೊಗ್ಗ : ಬಿಜೆಪಿ ಜನಾಕ್ರೋಶ ಸಮಾವೇಶಕ್ಕೆ ಬಿರುಗಾಳಿ, ಮಳೆಯ ಅಡ್ಡಿ!
ಶಿವಮೊಗ್ಗ (shivamogga), ಏ. 9 : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಏ. 12 ರ ಸಂಜೆ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಜನಾಕ್ರೋಶ ಸಮಾವೇಶಕ್ಕೆ, ಭಾರೀ ಬಿರುಗಾಳಿ – ಮಳೆ ಅಡ್ಡಿಯಾಗಿ ಪರಿಣಮಿಸಿತು!
ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಗೋಪಿ ವೃತ್ತದವರೆಗೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿದರು. ಗೋಪಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ, ಬಿರುಗಾಳಿ – ಮಳೆ ಆರಂಭವಾಯಿತು.
ಮಳೆಯಿಂದ ರಕ್ಷಣೆ ಪಡೆಯಲು ಕೆಲ ಕಾರ್ಯಕರ್ತರು ಅಕ್ಕಪಕ್ಕದ ಕಟ್ಟಡಗಳಲ್ಲಿ ಆಶ್ರಯ ಪಡೆದರೆ, ಮತ್ತೆ ಕೆಲವರು ತಾವು ಕುಳಿತ್ತಿದ್ದ ಕುರ್ಚಿಗಳನ್ನೇ ತಲೆಯ ಮೇಲೆ ಹಿಡಿದರು. ಈ ನಡುವೆ ಮಳೆಯಲ್ಲಿಯೇ ಕಾರ್ಯಕ್ರಮ ಆರಂಭಗೊಂಡಿತು. ಮುಖಂಡರು ಭಾಷಣ ಮಾಡಲಾರಂಭಿಸಿದರು. ಬಿರುಗಾಳಿಯಿಂದ ವೇದಿಕೆ ಅಲುಗಾಡಲಾರಂಭಿಸಿತು.
ತದನಂತರ ವೇದಿಕೆ ಮೇಲಿಂದ ಮುಖಂಡರು ಕೆಳಗಿಳಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಮಳೆಯಲ್ಲಿಯೇ ಕಾರ್ಯಕರ್ತರು ಹೊತ್ತು ಕುಣಿಯಲಾರಂಭಿಸಿ, ಘೋಷಣೆ ಕೂಗಿದ ಘಟನೆಯೂ ನಡೆಯಿತು. ಮಳೆ ಕಾರಣದಿಂದ ಸಮಾವೇಶ ಮೊಟಕುಗೊಳಿಸಲಾಯಿತು.
Shivamogga, Apr. 9: Heavy storm and rain disrupted the public rally organized by the BJP party at Gopi Circle in Shivamogga city on the evening of Apr. 12 against the state government, condemning the rise in prices of essential commodities!
BJP workers arrived in a procession from Ramannasreshthi Park to Gopi Circle. As the stage program began at Gopi Circle, a storm and rain began. During this, there was an incident where BJP state president BY Vijayendra was carried around by the workers in the rain and started dancing, shouting slogans. The conference was cut short due to the rain.