shimoga | Increasing number of migrants from other states in Shivamogga city - Will the police department wake up? shimoga | ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಹೊರ ರಾಜ್ಯಗಳ ವಲಸಿಗರು - ಎಚ್ಚೆತ್ತುಕೊಳ್ಳುವುದೆ ಪೊಲೀಸ್ ಇಲಾಖೆ?

shimoga | ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಹೊರ ರಾಜ್ಯಗಳ ಕಾರ್ಮಿಕರು – ಎಚ್ಚೆತ್ತುಕೊಳ್ಳುವುದೆ ಆಡಳಿತ?

ಶಿವಮೊಗ್ಗ (shivamogga), ಏ. 9: ಹೊರ ರಾಜ್ಯಗಳಿಂದ ಇತ್ತೀಚೆಗೆ ಶಿವಮೊಗ್ಗ ನಗರಕ್ಕೆ, ನಾನಾ ಕೆಲಸಕಾರ್ಯಗಳ ನಿಮಿತ್ತ ಆಗಮಿಸುವ ಹೊರ ರಾಜ್ಯಗಳ ಕಾರ್ಮಿಕರು, ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಅದರಲ್ಲಿಯೂ ಕಟ್ಟಡ ನಿರ್ಮಾಣ ಮತ್ತೀತರ ಅಭಿವೃದ್ದಿ ಕಾಮಗಾರಿಗಳಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಹೊರ ರಾಜ್ಯಗಳ ಕಾರ್ಮಿಕರು ಶಿವಮೊಗ್ಗ ನಗರ, ಹೊರವಲಯದ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಬಿಹಾರ, ಉತ್ತರ ಪ್ರದೇಶ, ಜಾರ್ಖಾಂಡ್, ಗುಜರಾತ್, ಒರಿಸ್ಸಾ ಸೇರಿದಂತೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಹಲವೆಡೆಯಿಂದ, ಶಿವಮೊಗ್ಗಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಆಗಮಿಸುತ್ತಾರೆ. ವಲಸಿಗ ಕಾರ್ಮಿಕರನ್ನು ಕರೆತರುವ ತಂಡಗಳೇ ಕಾರ್ಯನಿರ್ವಹಣೆ ಮಾಡುತ್ತಿವೆ.

ಸದ್ಯದ ಮಾಹಿತಿ ಅನುಸಾರ ಶಿವಮೊಗ್ಗ ಜಿಲ್ಲಾಡಳಿತದ ಹಂತದಲ್ಲಾಗಲಿ ಅಥವಾ ಕಾರ್ಮಿಕ ಇಲಾಖೆಯಲ್ಲಾಗಲಿ, ಹೊರ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರು ಹಾಗೂ ಇತರೆ ವಲಸಿಗರ ಮಾಹಿತಿ ಸಂಗ್ರಹಿಸುವ ಅಥವಾ ನಿಗಾ ಇಡುವ ಯಾವುದೇ ವ್ಯವಸ್ಥೆಗಳೂ ಇಲ್ಲವಾಗಿದೆ.

ಈ ಹಿಂದೆ ಹೊರ ರಾಜ್ಯಗಳಿಂದ ಆಗಮಿಸುವವರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಿತ್ತು. ಕಟ್ಟಡ ನಿರ್ಮಾಣ, ಅಭಿವೃದ್ದಿ ಕಾಮಗಾರಿ, ಹೋಟೆಲ್ ಮತ್ತೀತರ ಕೆಲಸಕಾರ್ಯಗಳಿಗೆ ಆಗಮಿಸುವವರ ವಿವರವನ್ನು ಸಂಬಂಧಿಸಿದವರು ಸಂಗ್ರಹಿಸಬೇಕಾಗಿತ್ತು. ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ನೀಡಬೇಕಾಗಿತ್ತು.

ಗಮನಹರಿಸಲಿ : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಬಿಹಾರ ಮೂಲದ ಕಾರ್ಮಿಕನೋರ್ವ ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಸದರಿ ಪ್ರಕರಣದ ನಂತರ, ಹೊರ ರಾಜ್ಯಗಳಿಂದ ಆಗಮಿಸುವವರ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಕೇಳಿಬರಲಾರಂಭಿಸಿದೆ. ಹೊರ ರಾಜ್ಯಗಳಂದ ಆಗಮಿಸಿದ ಕೆಲವರು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ನಂತರ ತಮ್ಮ ರಾಜ್ಯಗಳಲ್ಲಿ ತಲೆಮರೆಸಿಕೊಂಡ ಹಲವು ಊದಾಹರಣಗಳಿವೆ. ಅದೆಷ್ಟೊ ವೇಳೆ ಆರೋಪಿಗಳ ಫೋಟೋ, ವಿಳಾಸ ಮತ್ತೀತರ ಕನಿಷ್ಠ ಮಾಹಿತಿಗಳು ಲಭ್ಯವಾಗುವುದಿಲ್ಲ.

ಈ ಕಾರಣದಿಂದ ಹೊರ ರಾಜ್ಯಗಳ ಕಾರ್ಮಿಕರನ್ನು ಕರೆತರುವ ಕಾರ್ಯ ನಡೆಸುವವರಿಗೆ ಸೂಕ್ತ ತಿಳಿವಳಿಕೆ, ನಿರ್ದೇಶನ ನೀಡಬೇಕಾಗಿದೆ. ಕಾರ್ಮಿಕರ ಪೂರ್ವಾಪರ ಸಂಗ್ರಹಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಬೇಕಾಗಿದೆ. ಜೊತೆಗೆ ಸಂಬಂಧಿಸಿದ ಪೊಲೀಸ್ ಠಾಣೆಗಳು ಇಂತಹವರ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಬೇಕಾಗಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.

shimoga | Increasing number of migrants from other states in Shivamogga city – Will the police department wake up? :- Shivamogga, Apr. 9: Recently, the number of migrants arriving in Shivamogga city from other states for various purposes, including construction work, has been increasing. A large number of workers from other states are working in various parts of the district, including Shivamogga city and its outskirts, in building construction and other development works.

shivamogga | Details of vegetable prices on April 18 in the Shivamogga APMC wholesale market Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 14 ರ ತರಕಾರಿ ಬೆಲೆಗಳ ವಿವರ
special article | The role of parents in the protection and nurturing of children during summer vacation special article | ಬೇಸಿಗೆ ರಜೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಪಾಲಕರ ಪಾತ್ರ Next post special article | ಬೇಸಿಗೆ ರಜೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಪಾಲಕರ ಪಾತ್ರ