Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ!

shimoga rain | ಶಿವಮೊಗ್ಗ : ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ!

ಶಿವಮೊಗ್ಗ (shivamogga), ಏ.20: ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಏ.20 ರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಯಿತು!

ಬೆಳಿಗ್ಗೆಯಿಂದಲೆ ನಗರದಲ್ಲಿ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಿತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನೆಲೆಸಿತ್ತು. ಸಂಜೆಯಿಂದ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಬೀಳಲಾರಂಭಿಸಿತು.

ಸುಮಾರು 1 ಗಂಟೆಗೂ ಅಧಿಕ ಕಾಲ ನಗರದಲ್ಲಿ ಎಡೆಬಿಡದೆ ಮಳೆ ಸುರಿಯಿತು. ಕೆಲ ದಿನಗಳ ನಂತರ ಬಿದ್ದ ಮಳೆಯಿಂದ ನಾಗರೀಕರಲ್ಲಿ ನಿರಾಳ ಭಾವ ಮೂಡಿಸಿತ್ತು. ಕಾದ ಕಾವಲಿಯಂತಾಗಿದ್ದ ಇಳೆ ತಂಪಾಗುವಂತಾಯಿತು.

ಭಾರೀ ಮಳೆ ಕಾರಣದಿಂದ ನಗರದ ಹಲವೆಡೆ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ – ವಾಹನ ಸಂಚಾರ ಅಸ್ತವ್ಯಸ್ತವಾಗುವಂತಾಗಿತ್ತು.

ಶಿವಮೊಗ್ಗ ನಗರ ಮಾತ್ರವಲ್ಲದೆ ಹೊರವಲಯದ ಪ್ರದೇಶಗಳು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಾದ ವರದಿಗಳು ಬಂದಿವೆ.

Shivamogga, April 20: Heavy rain accompanied by thunder and lightning has started falling in many places in Shivamogga city and taluk since the evening of April 20!

The city was scorching hot since morning. The weather became cloudy after noon. Heavy rains started falling with strong winds and thunderstorms in the evening.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 20 ರ ತರಕಾರಿ ಬೆಲೆಗಳ ವಿವರ
Retired DG-IGP Om Prakash Rao who served as SP in Shimoga brutally murdered! ಶಿವಮೊಗ್ಗದಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಡಿಜಿ – ಐಜಿಪಿ ಓಂ ಪ್ರಕಾಶ್ ರಾವ್ ಭೀಕರ ಕೊಲೆ! Next post bengaluru | ಬೆಂಗಳೂರು : ನಿವೃತ್ತ ಡಿಜಿ – ಐಜಿಪಿ ಓಂ ಪ್ರಕಾಶ್ ರಾವ್ ಭೀಕರ ಕೊಲೆ!