shimoga | Heavy rain: Plane lands in Belgaum instead of Shimoga! shimoga | ಭಾರೀ ಮಳೆ : ಶಿವಮೊಗ್ಗದ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಆದ ವಿಮಾನ!

shimoga | ಭಾರೀ ಮಳೆ : ಶಿವಮೊಗ್ಗದ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಆದ ವಿಮಾನ!

ಶಿವಮೊಗ್ಗ (shivamogga), ಏ. 21: ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ ಸ್ಟಾರ್ ಏರಲೈನ್ಸ್ ಸಂಸ್ಥೆಯ ವಿಮಾನವು, ಭಾರೀ ಮಳೆಯ ಕಾರಣದಿಂದ ಶಿವಮೊಗ್ಗದ ಬದಲು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ  ಘಟನೆ ಏ. 20 ರಂದು ನಡೆದಿದೆ.

ಶಿವಮೊಗ್ಗದಿಂದ ಸರಿಸುಮಾರು 291 ಕಿ.ಮೀ. (ರಸ್ತೆ ಮಾರ್ಗ) ದೂರದಲ್ಲಿರುವ ಬೆಳಗಾವಿಯಲ್ಲಿ ವಿಮಾನ ಲ್ಯಾಂಡಿಂಗ್ ಆಗಿದ್ದರಿಂದ, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಯಿತು. ಬಸ್ ಮತ್ತೀತರ ಬದಲಿ ವ್ಯವಸ್ಥೆಯ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಾಯ್ತು? : ತಿರುಪತಿಯಿಂದ ಹೊರಟ ಸ್ಟಾರ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನವು, ಸಂಜೆ 5 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿತ್ತು.  ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಸಂಜೆ ಭಾರೀ ಮಳೆಯಾಗುತ್ತಿತ್ತು. ಮಂಜು ಮುಸುಕಿದ ವಾತಾವರಣ ಕಂಡುಬಂದಿತ್ತು.

ವಿಸಿಬಲಿಟಿ ಸಮಸ್ಯೆ ಕಾರಣದಿಂದ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಸದರಿ ವಿಮಾನವನ್ನು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.

ಪರಿಹಾರ ಯಾವಾಗ? : ದಿಢೀರ್ ಎದುರಾಗುವ ಹವಾಮಾನ ವೈಪರೀತ್ಯ ಹಾಗೂ ರಾತ್ರಿ ವೇಳೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆ ಎದುರಾಗುತ್ತಿದೆ. ಈ ಕಾರಣದಿಂದ ಹವಾಮಾನ ವೈಪರೀತ್ಯ ಎದುರಾದ ಸಂದರ್ಭಗಳಲ್ಲಿಯೂ ಮತ್ತು ರಾತ್ರಿ ವೇಳೆಯೂ ವಿಮಾನ ಲ್ಯಾಂಡಿಂಗ್ ಮಾಡುವ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಆದರೆ ಇಲ್ಲಿಯವರೆಗೂ ಸದರಿ ಕಾಮಗಾರಿ ಪೂರ್ಣಗೊಂಡಿಲ್ಲ. ಉಪಕರಣವೊಂದರ ಅಳವಡಿಕೆ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಕಾಲಮಿತಿಯೊಳಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ವಿಸಿಬಲಿಟಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ – ರಾಜ್ಯ ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಪ್ರಯಾಣಿಕರ ಆಗ್ರಹವಾಗಿದೆ.

Shivamogga, Apr. 18: An incident occurred on Apr. 20 when a Star Airlines flight arriving in Shivamogga from Tirupati landed at belagavi airport instead of Shivamogga due to heavy rain. The passengers were in serious trouble as the plane landed in belagavi, which is approximately 291 km (by road) from Shivamogga. It is learnt that they reached Shivamogga through alternative means such as buses.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 21 ರ ತರಕಾರಿ ಬೆಲೆಗಳ ವಿವರ
bhadravati | Father and son drown in Bhadra Dam backwater! bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಸಾವು! Next post bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗನ ದಾರುಣ ಸಾವು!