Shikaripur | Shikaripur Police's massive operation: Two arrested - 16 bikes seized! shikaripur | ಶಿಕಾರಿಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಇಬ್ಬರು ಅರೆಸ್ಟ್ - 16 ಬೈಕ್ ಗಳು ವಶ!

shikaripur | ಶಿಕಾರಿಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಇಬ್ಬರು ಅರೆಸ್ಟ್ – 16 ಬೈಕ್ ಗಳು ವಶ!

ಶಿಕಾರಿಪುರ (shikaripura), ಏ. 26: ರಾಜ್ಯದ ವಿವಿಧೆಡೆ ಬೈಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಬೈಕ್ ಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ದೊಡ್ಡ ಲಿಂಗನೇಹಳ್ಳಿ ನಿವಾಸಿ ಪ್ರತಾಪ್ (33) ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಚೋಡ್ ಗ್ರಾಮದ ನಿವಾಸಿ ಭೋಜರಾಜ (32) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಏ. 25 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬಂಧಿತರಿಂದ 20.50 ಲಕ್ಷ ರೂ. ಮೌಲ್ಯದ 16 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 1, ಅರಸೀಕೆರೆ ಠಾಣಾ ವ್ಯಾಪ್ತಿಯ 1, ತರೀಕೆರೆ ಠಾಣಾ ವ್ಯಾಪ್ತಿಯ 2, ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿ, ಶಿರಾ ಠಾಣಾ ವ್ಯಾಪ್ತಿ, ಚಿತ್ರದುರ್ಗ ಠಾಣಾ ವ್ಯಾಪ್ತಿ 1,

ಜಗಳೂರು ಠಾಣಾ ವ್ಯಾಪ್ತಿ, ಕೂಡ್ಲಿಗಿ ಠಾಣಾ ವ್ಯಾಪ್ತಿ, ಕೊಟ್ಟೂರು ಠಾಣಾ ವ್ಯಾಪ್ತಿ, ಹಗರಿಬೊಮ್ಮನಹಳ್ಳಿ ಠಾಣಾ ವ್ಯಾಪ್ತಿ, ಹೊಸಪೇಟೆ ಠಾಣಾ ವ್ಯಾಪ್ತಿ, ಬೆಂಡೆಗೇರೆ ಠಾಣಾ ವ್ಯಾಪ್ತಿ, ಮುನಿರಬಾದ್ ಠಾಣಾ ವ್ಯಾಪ್ತಿ, ಮುಂಡರಗಿ ಠಾಣಾ ವ್ಯಾಪ್ತಿ,

ಹೂವಿನಹಡಗಲಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಶಿಕಾರಿಪುರ ಡಿವೈಎಸ್ಪಿ ಕೇಶವ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಶರತ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಮಲ್ಲೇಶಪ್ಪ, ಹೆಚ್.ಸಿ ಗಳಾದ ಸಂದೀಪ್, ಗಂಗಾಧರ್,

ಸಿಪಿಸಿಗಳಾದ ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂದ್ರ, ವಿಜಯ್, ಚೇತನ್, ನಾಗರಾಜ್, ನವೀನ್, ರಾಜ್ ಕುಮಾರ್, ಜಯಶೀಲ, ವೀರೇಶ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ಕೃಷ್ಣಪ್ಪರವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shikaripura, Apr. 26: The Shikaripura town police arrested two accused involved in bike thefts in various parts of the state and seized bikes worth lakhs of rupees. An incident has taken place.

Jog Falls viewing allowed from May 1st ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ Previous post jogfalls | ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ
Bhadravati: Railway flyover finally opened for vehicular traffic ಭದ್ರಾವತಿ : ಕೊನೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ರೈಲ್ವೆ ಮೇಲ್ಸೇತುವೆ Next post bhadravati | ಭದ್ರಾವತಿ : ಕೊನೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ರೈಲ್ವೆ ಮೇಲ್ಸೇತುವೆ