hosanagara | Another huge bridge is being built on the Sharavati backwaters! hosanagara | ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿದೆ ಮತ್ತೊಂದು ಬೃಹತ್ ಸೇತುವೆ!

hosanagara | ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿದೆ ಮತ್ತೊಂದು ಬೃಹತ್ ಸೇತುವೆ!

ಹೊಸನಗರ (hosanagara), ಏ. 28: ಸಿಗಂದೂರು ಸಮೀಪದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾರ್ಯ ಬಹುತೇಕ ಪೂರ್ಣ ಹಂತಕ್ಕೆ ಬಂದಿದೆ. ಈ ನಡುವೆ ಹೊಸನಗರ ಪಟ್ಟಣ ಸಮೀಪ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಕೂಡ ಸಮರೋಪಾದಿಯಲ್ಲಿ ಸಾಗಿದೆ.

ಹೊಸನಗರ ಪಟ್ಟಣದ ಹೊರವಲಯದಿಂದ ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ಧಾರಿ ಹಾದು ಹೋಗುತ್ತದೆ. ಈಗಾಗಲೇ ಸದರಿ ಹೆದ್ಧಾರಿಯನ್ನು 313 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾರ್ಯ ನಡೆಸಲಾಗುತ್ತಿದೆ.

ಇದರಡಿ ಹೊಸನಗರ ಪಟ್ಟಣ ಹೊರವಲಯದ ಕಲ್ಲಹಳ್ಳ ಸಮೀಪದ ಸುತ್ತಾ ಹಾಗೂ ಅಡಗೋಡಿ ನಡುವೆ ಶರಾವತಿ ಹಿನ್ನೀರಿನಲ್ಲಿ, ಬೃಹತ್ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಪಿಲ್ಲರ್ ಗಳ ನಿರ್ಮಾಣ ಪೂರ್ಣಗೊಂಡಿದೆ. ಪ್ರಸ್ತುತ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸದರಿ ಸೇತುವೆಯು 1.5 ಕಿ.ಮೀ. ಉದ್ದವಿದ್ದು, ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಅಭಿವೃದ್ದಿಪಡಿಸಲಾಗುತ್ತಿದೆ. ಸದರಿ ಸೇತುವೆ ನಿರ್ಮಾಣಗೊಂಡರೆ, ಪ್ರಸಿದ್ದ ಧಾರ್ಮಿಕ ಕ್ಷೇತ್ರ ಕೊಲ್ಲೂರು ಸೇರಿದಂತೆ ವಿವಿಧ ಪ್ರದೇಶಗಳ ಸಂಪರ್ಕ ಮತ್ತಷ್ಟು ಹತ್ತಿರವಾಗಲಿದೆ.

ಭೇಟಿ : ಏ. 27 ರಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಸದರಿ ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದರು. ವಿಳಂಬಕ್ಕೆ ಆಸ್ಪದವಾಗದಂತೆ, ಕಾಲಮಿತಿಯೊಳಗೆ ಜನ – ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಸುಬ್ರಹ್ಮಣ್ಯ ಮತ್ತಿಮನೆ, ಟಿ ಡಿ ಮೇಘರಾಜ್, ಕೆ ವಿ ಕೃಷ್ಣಮೂರ್ತಿ, ಎನ್ ಆರ್ ದೇವಾನಂದ್, ಸುರೇಶ್ ಸ್ವಾಮಿರಾವ್, ಗಣಪತಿ ಬೆಳಗೋಡು, ಎಂ ಎನ್ ಸುಧಾಕರ್, ಉಮೇಶ್ ಹಾಲಗದ್ದೆ, ಹೆಚ್ ಆರ್ ತೀರ್ಥೇಶ್, ಬಿ ಯುವರಾಜ್, ವೀರೇಶ್, ಯುವರಾಜ್, ಮೋಹನ್ ಮಂಡಾನಿ, ಶಿವಾನಂದ ಹಿರೇಮಣತಿ, ನಗರ ನಿತಿನ್ ಸೇರಿದಂತೆ ಮೊದಲಾದವರಿದ್ದರು.

*** ‘ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಪರಿಶ್ರಮದ ಕಾರಣದಿಂದ ರಾಣೆಬೆನ್ನೂರು – ಬೈಂದೂರು ನಡುವಿನ ರಸ್ತೆ ರಾಷ್ಟ್ರೀಯ ಹೆದ್ಧಾರಿಯಾಗಿ ಘೋಷಣೆಯಾಗಿ ಅಭಿವೃದ್ದಿಗೊಳ್ಳುತ್ತಿದೆ. ಸದರಿ ಹೆದ್ದಾರಿಗೆ ಹೊಸನಗರ ಪಟ್ಟಣ ಹೊರವಲಯ ಕಲ್ಲಹಳ್ಳ ಬಳಿಯ ಸುತ್ತಾ – ಅಡಗೋಡಿ ನಡುವಿನ ಶರಾವತಿ ನದಿ ಹಿನ್ನೀರಿಗೆ ಬೃಹತ್ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸದರಿ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ತಾಲೂಕಿನ ಸಂಪೆಕಟ್ಟೆ ಭಾಗ ಸೇರಿದಂತೆ ಪ್ರಸಿದ್ದ ಧಾರ್ಮಿಕ ತಾಣ ಕೊಲ್ಲೂರು ಸಂಪರ್ಕ ಅತ್ಯಂತ ಸಮೀಪವಾಗಲಿದೆ. ಹೊಸನಗರ ಪಟ್ಟಣದ ಸರ್ವಾಂಗೀಣ ಅಭಿವೃದ್ದಿ ಸಹಕಾರಿಯಾಗಲಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಗಳಿಂದ ಪಶ್ಚಿಮಘಟ್ಟ ಪ್ರದೇಶದ ನಿವಾಸಿಗಳು ದಶಕಗಳಿಂದ ಎದುರಿಸುತ್ತಿದ್ದ ಸಂಕಷ್ಟಗಳಿಗೆ ಪರಿಹಾರ ದೊರಕಲಿದೆ’ ಎಂದು ಹೊಸನಗರ ತಾಲೂಕು ಬಿಜೆಪಿ ಯುವ ಮುಖಂಡರೂ ಆದ ರಾಜ್ಯ ಎಂಸಿಎ ಮಾಜಿ ನಿರ್ದೇಶಕ ಹೆಚ್ ಆರ್ ತೀರ್ಥೇಶ್ ಅವರು ಅಭಿಪ್ರಾಯಪಡುತ್ತಾರೆ. 

Hosanagara, Apr. 28: The bridge construction work on the Sharavati backwaters near Sigandur is almost complete. Meanwhile, the construction work on the huge bridge being built on the Sharavati backwaters near Hosanagara town is also progressing at a brisk pace. The Byndoor-Ranebennur National Highway passes through the outskirts of Hosanagara town. The said highway is already being developing at a cost of Rs. 313 crore. Under this, a huge bridge is being constructed on the Sharavati backwaters between Sutta and Adagodi near Kallahalla on the outskirts of Hosanagara town. The construction of the pillars has already been completed. Currently, the construction of the retaining wall is underway.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 28 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 29 ರ ತರಕಾರಿ ಬೆಲೆಗಳ ವಿವರ