What did the Chairman of Shimoga District Guarantee Scheme Authority say about the release of gruhalakshmi scheme balance amount and IT-GST issue? ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ ಮತ್ತು ಐಟಿ-ಜಿಎಸ್’ಟಿ ಸಮಸ್ಯೆ ಬಗ್ಗೆ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು?

gruhalakshmi scheme | ಮೇ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಸಂದಾಯ!

ಬೆಳಗಾವಿ (belagavi), ಏ. 30: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮೀ ಯೋಜನೆಯಡಿ, ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮೆ ಮಾಡಲಾಗುತ್ತಿದೆ. ಆದರೆ ಕೆಲ ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ಯೋಜನೆಯಡಿ ಹಣ ಜಮೆಯಾಗಿಲ್ಲ.

ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ಮೂರು ತಿಂಗಳ ಬಾಕಿ ಮೊತ್ತ ಸಂದಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಏ. 29 ರಂದು ಬೆಳಗಾವಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯೋಜನೆಯಡಿ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣವು ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅನುಮೋದನೆ ದೊರಕಿದೆ. ಒಂದು ವಾರ ಒಂದು ತಿಂಗಳ ಹಣ ಹಾಗೂ ಮತ್ತೊಂದು ವಾರ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

Belagavi, Apr. 30: Under the state government’s ambitious gruhalakshmi Yojana, Rs. 2,000 is being deposited in the bank accounts of women every month. But for the past few months, money has not been deposited in the accounts of the beneficiaries under the scheme.

Women and Child Development Minister Lakshmi Hebbalkar has clarified this and said that the three months’ arrears will be paid to the beneficiaries in May. He spoke to reporters in Belgaum on April 29. Under the scheme, the money for the months of January, February and March will be released in May.

Shimoga | Friend's murder case: Life imprisonment for Koli Fayaz, Krishna! shimoga | ಸ್ನೇಹಿತನ ಕೊಲೆ ಪ್ರಕರಣ : ಕೋಳಿ ಫಯಾಜ್ ಕೃಷ್ಣಗೆ ಜೀವಾವಧಿ ಶಿಕ್ಷೆ! Previous post shimoga | ಸ್ನೇಹಿತನ ಕೊಲೆ ಪ್ರಕರಣ : ಕೋಳಿ ಫಯಾಜ್, ಕೃಷ್ಣಗೆ ಜೀವಾವಧಿ ಶಿಕ್ಷೆ!
shimoga | Shivamogga: Giant python conservation! shimoga | ಶಿವಮೊಗ್ಗ : ಬೃಹದಾಕಾರದ ಹೆಬ್ಬಾವು ಸಂರಕ್ಷಣೆ! Next post shimoga | ಶಿವಮೊಗ್ಗ : ಬೃಹದಾಕಾರದ ಹೆಬ್ಬಾವು ಸಂರಕ್ಷಣೆ!