shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!

shimoga rain alert | ಚಂಡಮಾರುತ, ಬಿಸಿಲ ಧಗೆ ಎಫೆಕ್ಟ್ : ಭಾರೀ ಮಳೆ ಮುನ್ಸೂಚನೆ!

ಶಿವಮೊಗ್ಗ (shivamogga), ಮೇ 1: ಮುಂಗಾರು ಪೂರ್ವ ಮಳೆಯು, ಮೇ ತಿಂಗಳಲ್ಲಿಯೂ ಮುಂದುವರಿಕೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮೇ 6 ರವರೆಗೆ ಮಲೆನಾಡು ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಆಂಧ್ರಪ್ರದೇಶ ಭಾಗದ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಹಾಗೂ ಪ್ರಸ್ತುತ ಏರುತ್ತಿರುವ ಬಿಸಿಲ ಧಗೆಯ ಕಾರಣದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶಿವಮೊಗ್ಗ, ಬೆಂಗಳೂರು ನಗರ – ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮೇ 1 ರಿಂದ 3 ರವರೆಗೆ ಸಾಧಾರಣ ಮಳೆಯಾಗಲಿದೆ. ಮೇ 4 ರಿಂದ 6 ರವರೆಗೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೆಚ್ಚಿದ ತಾಪ : ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಸಿಲ ತಾಪ ಏರುಗತಿಯಲ್ಲಿ ಸಾಗಿದೆ. ಶಿವಮೊಗ್ಗ ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಪ್ರಮಾಣದ ತಾಪಮಾನ ದಾಖಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯೂ ಉಷ್ಣಾಂಶದ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತಿದೆ.

ಆದರೆ ಜಿಲ್ಲೆಯ ವಿವಿಧೆಡೆ  ಆಗಾಗ್ಗೆ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯು ಬಿಸಿಲ ತಾಪ ಕೊಂಚ ತಗ್ಗಿಸಿದೆ. ಜೊತೆಗೆ ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗುವಂತೆ ಮಾಡಿದೆ.

Shivamogga, May 1: The India Meteorological Department has forecast that the pre-monsoon rains will continue in May as well. It has said that there is a possibility of heavy rain in various parts of the state, including the Malnad region, till May 6.

It has been stated that widespread rainfall is likely in Shivamogga, Bangalore Urban – Rural, Kolar, Chikkaballapur, Ramanagara, Mysore, Chamarajanagar, Hassan, Tumkur, Davangere, Chikkamagaluru, Mandya, Bellary and Chitradurga districts.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 1 ರ ತರಕಾರಿ ಬೆಲೆಗಳ ವಿವರ
Shimoga | SSLC Result | Three students from Shimoga scored 625 out of 625! Shimoga | SSLC Result | 625 ಕ್ಕೆ 625 ಅಂಕ ಗಳಿಸಿದ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು! Next post bengaluru | ನಾಳೆಯೇ SSLC ಫಲಿತಾಂಶ : ಎಷ್ಟು ಗಂಟೆಗೆ ರಿಸಲ್ಟ್? ನೋಡೋದು ಹೇಗೆ?