Shimoga : Heavy rain is forecast to continue! ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!

shimoga rain | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!

ಶಿವಮೊಗ್ಗ (shivamogga), ಮೇ 3: ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ, ಶನಿವಾರ ಮುಂಜಾನೆ ಗುಡುಗು ಸಹಿತ ಮಳೆಯಾಯಿತು. ಇದರಿಂದ ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದ್ದ ನಗರದಲ್ಲಿ ತಣ್ಣನೆಯ ವಾತಾವರಣ ನೆಲೆಸುವಂತಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಚಲನೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ರಾಜ್ಯದ ಮಲೆನಾಡು ಭಾಗ ಸೇರಿದಂತೆ ವಿವಿಧೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ವ್ಯಾಪಕ ಮಳೆಯಾಗುತ್ತಿದೆ.

ಮೇ 7 ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದೆಡೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೇಸಿಗೆ ತಾಪ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿರುವುದು ನಾಗರೀಕರಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಾನುವಾರುಗಳ ಮೇವು – ನೀರಿಗೆ ಸಾಕಷ್ಟು ಅನುಕೂಲಕರವಾಗಿ ಪರಿಣಮಿಸಿದೆ.

Shivamogga, May 3: Various parts of the taluk, including Shivamogga city, received thundershowers since early Saturday morning. This brought cool weather to the city, which had been reeling under the scorching heat.

In the wake of the severe weather conditions caused by the cyclonic circulation in the Bay of Bengal, pre-monsoon rains have intensified in various parts of the state, including the Malnad region. Widespread rainfall is occurring.

Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post shimoga |ಶಿವಮೊಗ್ಗ : ಮೇ 3 ರಂದು ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ?
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 4 ರ ತರಕಾರಿ ಬೆಲೆಗಳ ವಿವರ