
shimoga | ಶಿವಮೊಗ್ಗದಲ್ಲಿ ಕುಸಿಯುತ್ತಿರುವ ರಸ್ತೆ : ಕಣ್ಮುಚ್ಚಿ ಕುಳಿತಿದೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 4: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜ್ ಸಮೀಪ ಹಾದು ಹೋಗಿರುವ, ತುಂಗಾ ಮೇಲ್ದಂಡೆ ನಾಲೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ನಿರಂತರವಾಗಿ ಕುಸಿತವಾಗುತ್ತಿದೆ. ಅಪಾಯಕಾರಿಯಾಗಿ ಪರಿಣಮಿಸಲಾರಂಭಿಸಿದೆ!
ಹೆದ್ಧಾರಿಯ ಒಂದು ಬದಿ ನಾಲೆಗೆ ನಿರ್ಮಿಸಿರುವ ತಡೆಗೋಡೆ ಕುಸಿದಿದೆ. ಉಳಿದ ಭಾಗ ಕೂಡ ಕ್ರಮೇಣ ಕುಸಿಯಲಾರಂಭಿಸಿದೆ. ಸ್ಥಳದಲ್ಲಿ ಪೊಲೀಸ್ ಇಲಾಖೆಯಿಟ್ಟಿದ್ದ ಬ್ಯಾರಿಕೇಡ್ ಗಳು ಕೂಡ ಬಿದ್ದಿವೆ ಎಂದು ಸ್ಥಳೀಯ ನಾಗರೀಕರು ಮಾಹಿತಿ ನೀಡಿದ್ದಾರೆ.
ಸದರಿ ಹೆದ್ದಾರಿಯಲ್ಲಿ ಅತೀ ಹೆಚ್ಚು ಪ್ರಮಾಣದ ವಾಹನಗಳ ದಟ್ಟಣೆಯಿದೆ. ಹಗಲಿರುಳು ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಗೆಯೇ ಸೇತುವೆ ಮೂಲಕ ಜನ – ಜಾನುವಾರುಗಳ ಸಂಚಾರವೂ ಹೆಚ್ಚಿದೆ.
ಕಳೆದ ಒಂದೂವರೆ ವರ್ಷದಿಂದಲೂ ಸೇತುವೆ ಬಳಿ ಹೆದ್ದಾರಿಯ ತಡೆಗೋಡೆ ನಿರಂತರವಾಗಿ ಕುಸಿಯುತ್ತಿದೆ. ಈ ಹಿಂದೆ ಪೊಲೀಸ್ ಇಲಾಖೆಯು ಸದರಿ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿತ್ತು. ಹಾಗೆಯೇ ಹೆದ್ದಾರಿ ಇಲಾಖೆಯು ಕುಸಿತವಾಗುತ್ತಿರುವ ಸ್ಥಳದಲ್ಲಿ ಮಣ್ಣು ಹಾಕಿತ್ತು.
ಆದರೆ ಕುಸಿತದ ಪ್ರಮಾಣ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಗಾಲದ ವೇಳೆ ಮತ್ತಷ್ಟು ಕುಸಿತವಾಗಿ, ರಸ್ತೆಯೇ ನಾಲೆಗೆ ಕುಸಿದು ಬೀಳುವ ಆತಂಕವಿದೆ.
ಏನಾದರೂ ತಡೆಗೋಡೆ ಕುಸಿತವಾಗಿ, ಕೊಂಚ ಹೆಚ್ಚು ಕಮ್ಮಿಯಾದರೂ ವಾಹನಗಳು ನೂರಾರು ಅಡಿ ಆಳದ ನಾಲೆಗೆ ಬೀಳುವಂತಾಗುತ್ತದೆ. ದೊಡ್ಡ ಪ್ರಮಾಣದ ಅನಾಹುತವೇ ಸಂಭವಿಸುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ನಿರ್ಲಕ್ಷ್ಯವೇಕೆ? : ಸೇತುವೆ ಬಳಿ ತಡೆಗೋಡೆ ಕುಸಿಯುತ್ತಿರುವ ಸಂಗತಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಗಮನಕ್ಕಿದೆ. ಆದಾಗ್ಯೂ ಕೂಡ ಇಲ್ಲಿಯವರೆಗೂ ಕುಸಿತ ತಡೆಗಟ್ಟಿ, ಸುಸಜ್ಜಿತ ತಡೆಗೋಡೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಾಗಿಲ್ಲದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ರಾಷ್ಟ್ರೀಯ ಹೆದ್ಧಾರಿ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ತಡೆಗೋಡೆ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಈ ಮೂಲಕ ನಾಗರೀಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಾಗರೀಕರು ಒತ್ತಾಯಿಸುತ್ತಾರೆ.
Shivamogga, May 4: One side of the national highway near the Tunga Upper River Canal Bridge, which passes near Sharavathi Dental College in Gadikoppa on the outskirts of Shivamogga city, is continuously collapsing. It has started to become dangerous!
The barrier built on one side of the highway has collapsed. The remaining part has also gradually started collapsing. Local citizens have informed that the barricades put up by the police department at the site have also fallen.
There is a lot of traffic on the highway. Thousands of vehicles ply day and night. There is also an increase in the movement of people and livestock through the bridge.