
shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸ್ ಬ್ರೀಫಿಂಗ್!
ಶಿವಮೊಗ್ಗ (shivamogga), ಮೇ 4: ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಗೋಚರತೆ ಹೆಚ್ಚಿಸಲು ಹಾಗೂ ಸಮುದಾಯದತ್ತ ಪೊಲೀಸ್ ವ್ಯವಸ್ಥೆಯ ಭಾಗವಾಗಿ, ಮೇ 4 ರಂದು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬ್ರೀಫಿಂಗ್ ಸಭೆಗಳು ನಡೆದವು.
ಶಿವಮೊಗ್ಗ ನಗರದ ಅಶೋಕ ವೃತ್ತ, ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತ, ಗುಡ್ ಲಕ್ ಸರ್ಕಲ್, ವಿನೋಬನಗರದ ಎಪಿಎಂಸಿ ಸಮೀಪ, ಆಲ್ಕೋಳ ವೃತ್ತ, ರೈಲ್ವೆ ನಿಲ್ದಾಣ,
ಭದ್ರಾವತಿಯ ಕೂಲಿ ಬ್ಲಾಕ್ ಶೆಡ್, ಬೊಮ್ಮನಕಟ್ಟೆ, ಜನ್ನಾಪುರ, ಸಂತೇ ಮೈದಾನ, ಹೊಸಮನೆ ಬಡಾವಣೆ. ಸಾಗರ ಪಟ್ಟಣದ ಗುಡ್ಡೇಕೌತಿ, ಮುರುಘಾಮಠ ಸಮೀಪ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಪೊಲೀಸ್ ಬ್ರೀಫಿಂಗ್ ಸಭೆಗಳು ಆಯೋಜನೆಯಾಗಿದ್ದವು ಎಂದು ಭಾನುವಾರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಏನೀದು ಬ್ರೀಫಿಂಗ್? : ಸಾಮಾನ್ಯವಾಗಿ ಪೊಲೀಸ್ ಬ್ರೀಫಿಂಗ್ ಸಭೆಗಳು ನಿಯಮಿತವಾಗಿ, ಪೊಲೀಸ್ ಠಾಣೆಗಳಲ್ಲಿ ನಡೆಯುತ್ತವೆ. ಠಾಣಾಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿಗಳ ಸಭೆ ನಡೆಸಿ, ಕರ್ತವ್ಯ ನಿರ್ವಹಣೆಯ ಕುರಿತಂತೆ ಸಲಹೆ – ಸೂಚನೆ ನೀಡುತ್ತಾರೆ.
ಜಿ ಕೆ ಮಿಥುನ್ ಕುಮಾರ್ ಅವರು ಶಿವಮೊಗ್ಗ ಎಸ್ಪಿಯಾಗಿ ಆಗಮಿಸಿದ ನಂತರ, ಸದರಿ ಬ್ರೀಫಿಂಗ್ ಸಭೆಗಳನ್ನು ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ಭಾನುವಾರ ಆಯೋಜನೆಗೆ ಕ್ರಮಕೈಗೊಂಡಿದ್ದಾರೆ.
Shivamogga, May 4: To increase police visibility in public places and as part of the community-oriented policing system, police briefing meetings were held at various public places in Shivamogga district on May 4.
Ashoka Circle, Amir Ahmed Circle, Shivappanayaka Circle, Good Luck Circle, Near APMC, Vinobanagar, Alkola Circle, Railway Station,
Bhadravati’s Coolie Block Shed, Bommanakkatte, Jannapur, Santhe Maidan, Hosamane Layout. Sagar town’s Guddekauti, near Murugamath. Police briefing meetings were organized in Shikaripura and Shiralakoppa town limits.