
shimoga | ಶಿವಮೊಗ್ಗ ನಗರದಲ್ಲಿ ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?
ಶಿವಮೊಗ್ಗ (shivamogga), ಮೇ 6: ಶಿವಮೊಗ್ಗ ನಗರದಲ್ಲಿ ಮೇ 7 ಹಾಗೂ 8 ರಂದು, ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ.
ಈ ಕುರಿತಂತೆ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಮಿಥುನ್ ಕುಮಾರ್ ಅವರು, ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಗಾಜನೂರು ಜಲಾಶಯದಿಂದ ನೀರು ಪೂರೈಕೆಯಾಗುವ ಮೂಲ ಸ್ಥಾವರಕ್ಕೆ ವಿದ್ಯುತ್ ಸರಬರಾಜಾಗುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ದುರಸ್ತಿ ಮತ್ತು ನಿರ್ವಹಣೆ ಸಂಬಂಧ, ಮೆಸ್ಕಾಂ ಮೇ 7 ರಂದು ಮೆಸ್ಕಾಂ ವಿದ್ಯುತ್ ನಿಲುಗಡೆ ಮಾಡುತ್ತಿದೆ.
ಈ ಕಾರಣದಿಂದ ಮೇ 7 ಹಾಗೂ 8 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಾಗರೀಕರು ಸಹಕರಿಸುವಂತೆ ಮಂಡಳಿಯ ಎಇಇ ಮಿಥುನ್ ಕುಮಾರ್ ಅವರು ಮನವಿ ಮಾಡಿದ್ದಾರೆ.
Shivamogga, May 6: The Karnataka Urban Water Supply and Sewerage Board has announced that there will be disruptions in the daily drinking water supply in Shivamogga city on May 7 and 8.
The board’s Assistant Executive Engineer (AEE) Mithun Kumar gave this information in a statement released on Tuesday. MESCOM is conducting a power outage on May 7th due to repair and maintenance of the 110/11 kV power distribution station that supplies power to the base station, which receives water from the Gajanur reservoir.
Due to this, there will be a disruption in the daily drinking water supply in Shivamogga city on May 7th and 8th. The board’s AEE Mithun Kumar has appealed to the citizens to cooperate.