Shikaripura | Shikaripura: Accused arrested for stealing gold jewellery and cash from house! shikaripura | ಶಿಕಾರಿಪುರ : ಮನೆಯಲ್ಲಿ ಚಿನ್ನಾಭರಣ, ನಗದು ಕಳವು ಮಾಡಿದ್ದ ಆರೋಪಿ ಬಂಧನ!

shikaripura | ಶಿಕಾರಿಪುರ : ಮನೆಯಲ್ಲಿ ಚಿನ್ನಾಭರಣ, ನಗದು ಕಳವು ಮಾಡಿದ್ದ ಆರೋಪಿ ಬಂಧನ!

ಶಿಕಾರಿಪುರ (shikaripur), ಮೇ 8: ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ನಿಡನೇಗಿಲು ಗ್ರಾಮದ ನಿವಾಸಿ ಕೃಷ್ಣಪ್ಪ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯಿಂದ 44 ಗ್ರಾಂ 840 ಮಿಲಿ ತೂಕದ 4.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರ ಕೇರಿ ನಿವಾಸಿ ಮಹಿಳೆಯೋರ್ವರ ಮನೆಯಲ್ಲಿ, ಯಾರು ಇಲ್ಲದ ವೇಳೆ 18/3/2025 ರಂದು ಮನೆ ಮುಂಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ 45 ಗ್ರಾಂ ತೂಕದ ಚಿನ್ನಾಭರಣ ಹಾಗೂ 12 ಸಾವಿರ ನಗದು ಅಪಹರಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಪ್ರಶಾಂತ್ ಕುಮಾರ್ ಟಿ ಬಿ, ಶರತ್,

ಸಿಬ್ಬಂದಿಗಳಾದ ಸಿಹೆಚ್’ಸಿ ಸಂತೋಷ್ ಕುಮಾರ್ ಆರ್, ಸಿಪಿಸಿಗಳಾದ ರಾಕೇಶ್ ಜಿ, ಸಲ್ಮಾನ್ ಖಾನ್ ಹಾಜಿ, ಹಜರತ್ ಅಲಿ, ಪ್ರಶಾಂತ್ ಕುಮಾರ್, ಜಗದೀಶ್, ಗಿರೀಶ್ ನಾಯ್ಕ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್, ಎಪಿಸಿ ಆದರ್ಶ್ ಅವರ ಆರೋಪಿ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

Shikaripur, May 8: A man was arrested by the Shiralakoppa police station in Shikaripur taluk on charges of stealing gold jewellery and cash from a house. On 18/3/2025, a woman resident of Kurubara Keri under Shiralakoppa police station was robbed of 45 grams of gold jewellery and Rs. 12,000 in cash after breaking the lock of the front door of the house when no one was present.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 8 ರ ತರಕಾರಿ ಬೆಲೆಗಳ ವಿವರ
sagara | Sagar | When will the Sigandur Bridge be inaugurated? What did the MP say about Modi's arrival? sagara | ಸಾಗರ | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಮೋದಿ ಆಗಮನದ ಬಗ್ಗೆ ಸಂಸದರು ಹೇಳಿದ್ದೇನು? Next post sagara | ಸಾಗರ | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಮೋದಿ ಆಗಮನದ ಬಗ್ಗೆ ಸಂಸದರು ಹೇಳಿದ್ದೇನು?