
sagara | ಸಾಗರ | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಮೋದಿ ಆಗಮನದ ಬಗ್ಗೆ ಸಂಸದರು ಹೇಳಿದ್ದೇನು?
ಸಾಗರ (sagar), ಮೇ 8: ನೂರಾರು ಕೋಟಿ ರೂ. ವೆಚ್ಚದಲ್ಲಿ ಶರಾವತಿ ಹಿನ್ನೀರಿಗೆ ನಿರ್ಮಾಣ ಮಾಡಲಾಗುತ್ತಿರುವ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಪೂರ್ಣ ಹಂತಕ್ಕೆ ತಲುಪಿದ್ದು, ಮೇ 8 ರಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಸೇತುವೆ ಕಾಮಗಾರಿ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಪೂರ್ಣ ಹಂತಕ್ಕೆ ಬಂದಿದೆ. ಜೂನ್ 15 ಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ. ಜೂನ್ ಅಂತ್ಯದ ವೇಳೆಗೆ ಸೇತುವೆ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸೇತುವೆ ಉದ್ಘಾಟನೆ ಮಾಡಿಸುವ ಚಿಂತನೆ ನಡೆಸಲಾಗುತ್ತಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿಗಂದೂರು ಸೇತುವೆಯು ಒಟ್ಟಾರೆ ಎರಡು ಕಾಲು ಕಿ.ಮೀ. ಉದ್ದವಿದ್ದು, 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸದರಿ ಸೇತುವೆಗಾಗಿ ಸಾಗರ – ಮರಕುಟಿಗ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು.
ಹೊಸನಗರ ಪಟ್ಟಣ ಸಮೀಪದ ಸುತ್ತಾ ಬಳಿಯು ಒಂದೂವರೆ ಕಿ.ಮೀ. ಉದ್ದದ ಸೇತುವೆ ನಿರ್ಮಿಸಲಾಗುತ್ತಿದೆ. ಬೆಕ್ಕೋಡಿ ಸೇತುವೆ, ಪಟಗುಪ್ಪ ಸೇತುವೆ, ಬಿಲ್ ಸಾಗರ ಸೇರಿದಂತೆ ಮಲೆನಾಡಿನ ಪ್ರಮುಖ ಸ್ಥಳಗಳಲ್ಲಿ ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂ.ಗಳು ಮಲೆನಾಡು ಭಾಗಕ್ಕೆ ಮಂಜೂರಾಗಿದೆ. ಈ ಮೂಲಕ ಮಲೆನಾಡಿನ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದು ಸಂಸದರು ತಿಳಿಸಿದ್ದಾರೆ.
Sagar, May 8: The construction of the Sigandur Bridge, which is being built across the Sharavati backwaters at a cost of hundreds of crores of rupees, has reached its completion stage. On May 8, Lok Sabha member B Y Raghavendra inspected the bridge work.
Later, he spoke to reporters. He said that the construction work of Sigandur Bridge has reached its full stage. The work will be completed on June 15. The bridge will be inaugurated by the end of June.
Prime Minister Narendra Modi is expected to inaugurate the bridge. Union Minister for Road Transport and Highways Nitin Gadkari is expected to attend the inauguration ceremony.