
shimoga | ಶಿವಮೊಗ್ಗ | ಗಾಂಜಾ ಸಾಗಾಣೆ ಪ್ರಕರಣ : ಭದ್ರಾವತಿಯ ಮೂವರಿಗೆ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಮೇ 11: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಪ್ರಕರಣದಲ್ಲಿ, ಮೂವರಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿಯ ಜೀವನ್ ಎಂ (21), ಶರವಣ (35) ಹಾಗೂ ಜೀವನ್ ಕೆ (25) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕರ್‌ರವರು, ಮೇ 7 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 08-07-2021 ರಂದು ಶಿವಮೊಗ್ಗ ಸಿಇಎನ್ ಠಾಣೆ ಪೊಲೀಸರು, ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ, ಬಜಾಜ್ ಪಲ್ಸರ್ ಬೈಕ್ ನಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದವರನ್ನು ಬಂಧಿಸಿದ್ದರು.
ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದರು. ಬಂಧಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Shivamogga, May 11: The Principal District and Sessions Court of Shivamogga has sentenced three people to 4 years rigorous imprisonment in a case of transporting ganja on a two-wheeler. The verdict was delivered by Principal District and Sessions Judge Manjunath Nayak. Government prosecutor Suresh Kumar A.M. argued on behalf of the government.
More Stories
shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಿದ ಆಯುಕ್ತ ಕೆ ಎ ದಯಾನಂದ್
Shivamogga: KHB Commissioner K A Dayanand listened to the public’s grievance
ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಿದ ಕೆ ಹೆಚ್ ಬಿ ಆಯುಕ್ತ ಕೆ ಎ ದಯಾನಂದ್
shimoga crime news | ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!
Allowing alcohol consumption in front of the hotel and shop: File a case!
ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!
shimoga | ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!
Shivamogga : KHB Commissioner K A Dayanand made a surprise visit to various places and inspected!
ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!
shimoga | ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!
Shivamogga : Cannabis consumption – Case against three!
ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!
shimoga | power cut | ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga: Power outage in various places on July 20 th!
ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shimoga Tahsildar | ಏನೀದು ಉಚಿತ ಇ – ಪೌತಿ ಆಂದೋಲನ? ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಹೇಳಿದ್ದೇನು?
What is the free e-Pauti movement? What did Shivamogga Tahsildar Rajiv say?
ಏನೀದು ಉಚಿತ ಇ – ಪೌತಿ ಆಂದೋಲನ? ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಹೇಳಿದ್ದೇನು?