Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!

holehonnuru | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಕೊಲೆ : ಹೊಳೆಹೊನ್ನೂರು ಬಳಿ ಬೆಳ್ಳಂಬೆಳಿಗ್ಗೆ ನಡೆದ ದುಷ್ಕೃತ್ಯ!

ಭದ್ರಾವತಿ (bhadravati), ಮೇ 9: ವಾಕಿಂಗ್ ತೆರಳಿದ್ದ ವ್ಯಕ್ತಿಯೋರ್ವರನ್ನು ಕೊಲೆ ಮಾಡಿರುವ ಘಟನೆ, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಸ್ತೆಯಲ್ಲಿ ಮೇ 9 ರ ಮುಂಜಾನೆ ನಡೆದಿದೆ.

ಹೊಸಕೊಪ್ಪದ ನಿವಾಸಿ ಹೇಮಣ್ಣ (70) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಅಡಕೆ ಖೇಣಿ ವ್ಯವಹಾರ ನಡೆಸುತ್ತಿದ್ದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಚಿರಪರಿಚಿತ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಹೇಮಣ್ಣ ಅವರ ಮೇಲೆ ದಾಳಿಯಾಗಿತ್ತು. ಈ ವೇಳೆ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಹೇಳಲಾಗಿದೆ.

ಎಂದಿನಂತೆ ಅವರು ಮನೆಯಿಂದ ಮುಂಜಾನೆ ವಾಕಿಂಗ್ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಹೇಮಣ್ಣ ಅವರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು? ಹಂತಕರು ಯಾರು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Bhadravati, May 9: The murder of a man who had gone for a walk took place on the Government Pre-University College Road in Hosakoppa village near Holehonnur in Bhadravati taluk in the early hours of May 9. #holehonnuru, #holehonnuruMurder, #HolehonnuruNews,

sagara | Sagar | When will the Sigandur Bridge be inaugurated? What did the MP say about Modi's arrival? sagara | ಸಾಗರ | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಮೋದಿ ಆಗಮನದ ಬಗ್ಗೆ ಸಂಸದರು ಹೇಳಿದ್ದೇನು? Previous post sagara | ಸಾಗರ | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಮೋದಿ ಆಗಮನದ ಬಗ್ಗೆ ಸಂಸದರು ಹೇಳಿದ್ದೇನು?
bhadravati | holehonnuru | Car washed away in Bhadra canal! ಭದ್ರಾವತಿ | ಹೊಳೆಹೊನ್ನೂರು | ಭದ್ರಾ ನಾಲೆಯಲ್ಲಿ ಕೊಚ್ಚಿ ಹೋದ ಕಾರು! Next post bhadravati | holehonnuru | ಭದ್ರಾ ನಾಲೆಯಲ್ಲಿ ಕೊಚ್ಚಿ ಹೋದ ಕಾರು!