
bhadravati | holehonnuru | ಭದ್ರಾ ನಾಲೆಯಲ್ಲಿ ಕೊಚ್ಚಿ ಹೋದ ಕಾರು!
ಭದ್ರಾವತಿ (bhadravathi), ಮೇ 9: ಭದ್ರಾ ಬಲದಂಡೆ ನಾಲೆಗೆ ಕಾರೊಂದು ಉರುಳಿ ಬಿದ್ದ ಘಟನೆ ಮೇ 8 ರ ಸಂಜೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ನಡೆದಿದೆ.
ಸದರಿ ಕಾರು ದಾನವಾಡಿಯಿಂದ ನಾಗವಲ್ಲಿ ಗ್ರಾಮದೆಡೆಗೆ ತೆರಳುತ್ತಿದ್ದ ವೇಳೆ ನಾಲೆಗೆ ಕಾರು ಉರುಳಿಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸಂಜೆಯವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕಾರಿನ ಸುಳಿವು ಲಭ್ಯವಾಗಿರಲಿಲ್ಲ.
ಮೇ 9 ರ ಬೆಳಿಗ್ಗೆಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ನಾಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸಾಕಷ್ಟು ಹುಡುಕಾಟ ನಡೆಸಲಾರಂಭಿಸಿದೆ.
ಇತ್ತೀಚೆಗೆ ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡಲಾಗಿದ್ದು, ಇದರಿಂದ ನಾಲೆಯು ಮೈದುಂಬಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡೆತಡೆಯಾಗಿ ಪರಿಣಮಿಸಿದೆ.
ನಾಲೆಯಲ್ಲಿನ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಮುಳುಗು ತಜ್ಞರ ತಂಡವು ಕಿ.ಮೀ. ದೂರದವರೆಗೆ ನಾಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Bhadravati, May 9: An incident in which a car fell into the Bhadra Right Bank Canal took place on the evening of May 8 in Danawadi village near Holehonnur in Bhadravati taluk. The car was heading from Danawadi to Nagavalli village when it fell into a canal. It is said that only the driver was in the car, but more details are yet to be made available.
More Stories
shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಿದ ಆಯುಕ್ತ ಕೆ ಎ ದಯಾನಂದ್
Shivamogga: KHB Commissioner K A Dayanand listened to the public’s grievance
ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಿದ ಕೆ ಹೆಚ್ ಬಿ ಆಯುಕ್ತ ಕೆ ಎ ದಯಾನಂದ್
shimoga crime news | ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!
Allowing alcohol consumption in front of the hotel and shop: File a case!
ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!
shimoga | ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!
Shivamogga : KHB Commissioner K A Dayanand made a surprise visit to various places and inspected!
ಶಿವಮೊಗ್ಗ : ವಿವಿಧೆಡೆ ದಿಡೀರ್ ಭೇಟಿಯಿತ್ತು ಪರಿಶೀಲಿಸಿದ ಕೆಹೆಚ್’ಬಿ ಆಯುಕ್ತ ಕೆ ಎ ದಯಾನಂದ್!
shimoga | ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!
Shivamogga : Cannabis consumption – Case against three!
ಶಿವಮೊಗ್ಗ : ಗಾಂಜಾ ಅಮಲು – ಮೂವರ ವಿರುದ್ದ ಕೇಸ್!
shimoga | power cut | ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga: Power outage in various places on July 20 th!
ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shimoga Tahsildar | ಏನೀದು ಉಚಿತ ಇ – ಪೌತಿ ಆಂದೋಲನ? ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಹೇಳಿದ್ದೇನು?
What is the free e-Pauti movement? What did Shivamogga Tahsildar Rajiv say?
ಏನೀದು ಉಚಿತ ಇ – ಪೌತಿ ಆಂದೋಲನ? ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಹೇಳಿದ್ದೇನು?