
shimoga | ಶಿವಮೊಗ್ಗ | ಅಲ್ಪಸಂಖ್ಯಾತರ ವಸತಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕ – ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ (shivamogga) ಮೇ 9 : ಶಿವಮೊಗ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿಯಿರುವ, ಉಪನ್ಯಾಸಕರು / ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆ / ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ : ಕನ್ನಡ ಭಾಷಾ ಶಿಕ್ಷಕರು-7, ಇಂಗ್ಲೀಷ್ ಭಾಷಾ ಶಿಕ್ಷಕರು-9, ಹಿಂದಿ ಭಾಷಾ ಶಿಕ್ಷಕರು-4, ಉರ್ದು ಭಾಷಾ ಶಿಕ್ಷಕರು-2, ಗಣಿತ ಶಿಕ್ಷಕರು-4, ಸಾಮಾನ್ಯ ವಿಜ್ಞಾನ ಶಿಕ್ಷಕರು-4, ಸಮಾಜ ವಿಜ್ಞಾನ ಶಿಕ್ಷಕರು-8, ಗಣಕಯಂತ್ರ ಶಿಕ್ಷಕರು-2, ದೈಹಿಕ ಶಿಕ್ಷಣ ಶಿಕ್ಷಕರು-2 ಒಟ್ಟು-42 ಅತಿಥಿ ಶಿಕ್ಷಕರು.
ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರ : ಕನ್ನಡ ಭಾಷಾ ಶಿಕ್ಷಕರು-3, ಇಂಗ್ಲೀಷ್ ಭಾಷಾ ಶಿಕ್ಷಕರು-3, ಉರ್ದು ಭಾಷಾ ಶಿಕ್ಷಕರು-3, ಗಣಿತ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರು-3, ರಸಾಯನಶಾಸ್ತ್ರ ಉಪನ್ಯಾಸಕರು-3, ಜೀವಶಾಸ್ತ್ರ ಉಪನ್ಯಾಸಕರು-3, ವ್ಯವಹಾರ ಅಧ್ಯಯನ ಉಪನ್ಯಾಸಕರು-1, ಲೆಕ್ಕಶಾಸ್ತ್ರ ಉಪನ್ಯಾಸಕರು -2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು-1, ಅರ್ಥಶಾಸ್ತ್ರ ಉಪನ್ಯಾಸಕರು-1, ಇತಿಹಾಸ ಉಪನ್ಯಾಸಕರು-1 ಒಟ್ಟು 27 ಉಪನ್ಯಾಸಕರು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್‌ಸೈಟ್ https://dom.karnataka.gov.in ರಿಂದ ಪಡೆದು, ಮೇ 19 ರೊಳಗಾಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸುವುದು.
Shivamogga (shivamogga) May 9: Applications are invited from eligible candidates for temporary appointment for a period of 1 year for the vacant posts of lecturers/teachers in residential schools/colleges functioning under the Shivamogga Minority Welfare Department and Maulana Azad Model Schools. For more information, contact the Minority Information Centers at Shivamogga – 7676888388, Bhadravati – 9538853680, Thirthahalli – 8861982835, Soraba – 9513815513, Shikaripura – 7829136724, Hosanagara – 9008447029 and Sagar – 7338222907.