
ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಿಂದ ಜನಜಾಗೃತಿ ಕಾರ್ಯಕ್ರಮ
ಶಿವಮೊಗ್ಗ, ಎ. 5: ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಬ್ಬಂದಿಗಳು ಹೊಸನಗರ ತಾಲೂಕಿನ ಹುಂಚ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸೈಬರ್ ಅಪರಾಧ ಕುರಿತಂತೆ ಜನಜಾಗೃತಿ ಮೂಡಿಸಿದರು. ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಿದರು.
ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ, ಸಿಇಐಆರ್ ಸಾಫ್ಟ್’ವೇರ್ ತಂತ್ರಜ್ಞಾನದ ಮೂಲಕ ಹೇಗೆ ಪತ್ತೆ ಹಚ್ಚಿಕೊಡಲಾಗುತ್ತದೆ ಎಂಬುವುದರ ಬಗ್ಗೆ ಸಾರ್ವಜನಿಕರಿಗೆ ಸೈಬರ್ ಠಾಣೆ ಪೊಲೀಸರು ತಿಳಿ ಹೇಳಿದರು.
ಆನ್’ಲೈನ್ ಆಧಾರಿತ ವ್ಯವಹಾರದ ವೇಳೆ, ಒಟಿಪಿ ನಂಬರ್ ಹೇಳುವಂತೆ ಮೊಬೈಲ್ ಫೋನ್ ಗಳಿಗೆ ಅನಾಮಧೇಯ ಕರೆ-ಸಂದೇಶಗಳು ಆಗಮಿಸಿದ ವೇಳೆ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತಂತೆ ಸಲಹೆ-ಸೂಚನೆಗಳನ್ನು ಸಿಬ್ಬಂದಿಗಳು ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಜಯ್, ಜಗದೀಶ್, ಹುಂಚ ಪೊಲೀಸ್ ಔಟ್ ಪೋಸ್ಟ್ ಸಿಬ್ಬಂದಿ ಮಂಜುನಾಥ್ ಮೊದಲಾದವರಿದ್ದರು.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 25 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 25: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, 25-4-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ...
shimoga | ಶಿವಮೊಗ್ಗ : ಅಂತಿಮ ಯಾತ್ರೆಗೆ ಜನಸಾಗರ.. ಮುಗಿಲು ಮುಟ್ಟಿದ ಆಕ್ರಂದನ..!
shimoga | Manjunath Rao who was killed in a terrorist attack: Arrangements made for the last rites at Vijayanagara residence in Shivamogga
shimoga | ಭಯೋತ್ಪಾದಕ ಗುಂಡೇಟಿಗೆ ಬಲಿಯಾದ ಮಂಜುನಾಥ್ ರಾವ್ : ಶಿವಮೊಗ್ಗದ ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
shimoga|ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 24 ರ ತರಕಾರಿ ಬೆಲೆಗಳವಿವರ
ಶಿವಮೊಗ್ಗ (shivamogga), ಏ. 24: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, 24-4-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ...
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 23 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 23: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, 23-4-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ...