shimoga | Ganja sale on Bommanakkate – Basavanagangur road in Shimoga: Four youths arrested! shimoga | ಶಿವಮೊಗ್ಗದ ಬೊಮ್ಮನಕ್ಕಟೆ – ಬಸವನಗಂಗೂರು ರಸ್ತೆಯಲ್ಲಿ ಗಾಂಜಾ ಸೇಲ್ : ನಾಲ್ವರು ಯುವಕರು ಅರೆಸ್ಟ್!

shimoga | ಶಿವಮೊಗ್ಗದ ಬೊಮ್ಮನಕಟ್ಟೆ – ಬಸವನಗಂಗೂರು ರಸ್ತೆಯಲ್ಲಿ ಗಾಂಜಾ ಸೇಲ್ : ನಾಲ್ವರು ಯುವಕರು ಅರೆಸ್ಟ್!

ಶಿವಮೊಗ್ಗ (shivamogga), ಮೇ 11: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ – ಬಸವನಗಂಗೂರು ರಸ್ತೆಯಲ್ಲಿ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಸಿಇಎನ್ ಕ್ರೈಂ ಠಾಣೆ ಪೊಲೀಸರು ಮೇ 8 ರಂದು ಸದರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಗಳಾದ ಆಕಾಶ್ ಯಾನೆ ಮಚ್ಚೆ (20), ಕೇಶವ ವಿ (21), ನಾಗರಾಜ್ ಎಂ (21) ಹಾಗೂ ದಾವಣಗೆರೆ ಜಿಲ್ಲೆ ನ್ಯಾಮತಿ ಟೌನ್ ವಿನೋಬನಗರ ವಿ ದರ್ಶನ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 20 ರೂ. ಮೌಲ್ಯದ 1 ಕೆಜಿ 225 ಗ್ರಾಂ ತೂಕದ ಒಣ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ಅವರು ಕಾರ್ಯಾಚರಣೆ ನೇತೃತ್ವವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, May 11: The police arrested four youths on charges of selling ganja to the public on the Bommanakatte – Basavanagangur road on the outskirts of Shivamogga city.

Acting on a tip-off, the CEN Crime Station police conducted the operation on May 8, according to a statement issued by the district police department.

The police have seized 1 kg 225 grams of dry ganja worth Rs 20 from the arrested accused. The operation was led by CEN Crime Police Station DySP Krishnamurthy K, the release said.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 11 ರ ತರಕಾರಿ ಬೆಲೆಗಳ ವಿವರ
shimoga | Shivamogga | Fatal assault case: 2 years in prison! shimoga | ಶಿವಮೊಗ್ಗ | ಮಾರಣಾಂತಿಕ ಹಲ್ಲೆ ಪ್ರಕರಣ : 2 ವರ್ಷ ಜೈಲು ಶಿಕ್ಷೆ! Next post shimoga | ಶಿವಮೊಗ್ಗ | ಗಾಂಜಾ ಸಾಗಾಣೆ ಪ್ರಕರಣ : ಭದ್ರಾವತಿಯ ಮೂವರಿಗೆ ಜೈಲು ಶಿಕ್ಷೆ!