
shimoga | ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ಕುಂದುಕೊರತೆ ಸಭೆ – ಎಲ್ಲೆಲ್ಲಿ? ಯಾವಾಗ?
ಶಿವಮೊಗ್ಗ (shivamogga), ಮೇ 9: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೇ ತಿಂಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಿದ್ದಾರೆ.
ಈ ಕುರಿತಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವರ : ಮೇ 13 ರಂದು ಶಿಕಾರಿಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ, ಮೇ 20 ರಂದು ಸೊರಬ ತಾಲೂಕು ಕಚೇರಿ ಸಭಾಂಗಣ ಹಾಗೂ ಮೇ 27 ರಂದು ಹೊಸನಗರ ತಾಲೂಕು ಕಚೇರಿ ಸಭಾಂಗಣಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಗಳು ನಡೆಯಲಿವೆ.
ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, May 9: Officers of the Karnataka Lokayukta Police Division have organized public grievance meetings in various taluks of the district in the month of May. The Lokayukta Superintendent of Police has issued a notification in this regard. It has been informed that a meeting will be held to receive grievance applications from 11 am to 12.30 pm.
Details: Public grievance meetings will be held on May 13 at the Shikaripura Taluk Panchayat Hall, on May 20 at the Sorab Taluk Office Hall, and on May 27 at the Hosanagar Taluk Office Hall.
The Lokayukta Superintendent of Police has said in a statement that the public is invited to file written complaints against officers and staff who are irresponsible, negligent, unnecessarily late in performing government duties, and who demand bribes for official work.