Bhadravati: Police personnel who saved a person's life! bhadravati | ಭದ್ರಾವತಿ : ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳು!

bhadravati | ಭದ್ರಾವತಿ : ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳು!

ಭದ್ರಾವತಿ (bhadravathi), ಮೇ 11: ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯೋರ್ವರನ್ನು, ಪೊಲೀಸ್ ಸಿಬ್ಬಂದಿಗಳಿಬ್ಬರು ರಕ್ಷಣೆ ಮಾಡಿದ ಸಿನಿಮೀಯ ಶೈಲಿಯ ಘಟನೆ ಭದ್ರಾವತಿ ಹೊರವಲಯದ ವೀರಾಪುರ ಗ್ರಾಮದಲ್ಲಿ ನಡೆದಿದೆ.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಹಾಗೂ ವಾಹನ ಚಾಲಕ ಸಂತೋಷ್ ಕುಮಾರ್ ಜೀವ ರಕ್ಷಕ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಇವರ ಸಕಾಲಿಕ ಕ್ರಮಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಏನೀದು ಘಟನೆ? : ವೀರಾಪುರ ಗ್ರಾಮದ ನಿವಾಸಿಯಾದ, ಮದ್ಯ ವ್ಯಸನಿ ಚಾಲಕನೋರ್ವ ಮೇ 7 ರಂದು ಹಣಕ್ಕಾಗಿ ತಾಯಿಯ ಜೊತೆ ಗಲಾಟೆ ಮಾಡಿಕೊಂಡಿದ್ದ. ತದನಂತರ ಮನೆಯ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದ.

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ತಕ್ಷಣವೇ ಮಹಿಳೆಯು ಪೊಲೀಸ್ ಇಲಾಖೆ ತುರ್ತು ಸಹಾಯವಾಗಿ ಸಂಖ್ಯೆ – 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಅಂದು ಇಆರ್’ಎಸ್ಎಸ್ – 112 ವಾಹನದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿನಯ್ ಕುಮಾರ್ ಹಾಗೂ ವಾಹನ ಚಾಲಕ ಸಿಬ್ಬಂದಿ ಸಂತೋಷ್ ಕುಮಾರ್ ಅವರು, ತಕ್ಷಣವೇ ಸದರಿ ಮನೆಗೆ ದೌಡಾಯಿಸಿದ್ದರು. ಕೊಠಡಿಯ ಬಾಗಿಲು ತೆರೆದು, ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದರು.

Bhadravathi, May 11: A cinematic-style incident took place in Veerapur village on the outskirts of Bhadravathi, where two police personnel rescued a man who was about to commit suicide by hanging himself at home.

Vinay Kumar and driver Santosh Kumar of Bhadravati Rural Police Station are the life-saving police personnel. SP GK Mithun Kumar has praised their timely action.

Shimoga : Gram panchayat secretary caught with bribe money! ಶಿವಮೊಗ್ಗ : ಲಂಚದ ಹಣದ ಸಮೇತ ಸಿಕ್ಕಿಬಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ! Previous post shimoga | ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ಕುಂದುಕೊರತೆ ಸಭೆ – ಎಲ್ಲೆಲ್ಲಿ? ಯಾವಾಗ?
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 12 ರ ತರಕಾರಿ ಬೆಲೆಗಳ ವಿವರ