Shimoga | Shimoga Municipality area revision: Will the DC pay attention? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಗಮನಹರಿಸುವರೆ ಜಿಲ್ಲಾಧಿಕಾರಿ?

shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಗಮನಹರಿಸುವರೆ ಜಿಲ್ಲಾಧಿಕಾರಿ?

ಶಿವಮೊಗ್ಗ (shivamogga), ಮೇ 12: ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷ್ಕರಣೆ ವಿಷಯ ಸಂಪೂರ್ಣ ನೆನೆಗುದಿಗಿ ಬಿದ್ದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಕ್ತ ನಿರ್ಧಾರ ಕೈಗೊಂಡು, ಲಕ್ಷಾಂತರ ನಾಗರೀಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂಬ ಆಗ್ರಹ ನಾಗರೀಕ ವಲಯದಿಂದ ಕೇಳಿಬರಲಾರಂಭಿಸಿದೆ.

ವಿಳಂಬ : ರಾಜ್ಯ ಸರ್ಕಾರದ ಸೂಚನೆಯಂತೆ, ಮಹಾನಗರ ಪಾಲಿಕೆ ಆಡಳಿತವು ಕಳೆದ ವರ್ಷ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿತ್ತು. ಡ್ರೋಣ್ ಮೂಲಕವು ಮಾಹಿತಿ ಸಂಗ್ರಹಿಸಿತ್ತು.

ಆದರೆ ಸದರಿ ಮಾಹಿತಿ ಸಂಗ್ರಹಣೆ ಕಾರ್ಯ ವಿಳಂಬವಾಗಿತ್ತು. ಈ ನಡುವೆ ಪಾಲಿಕೆ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ, ರಾಜ್ಯ ಸರ್ಕಾರಕ್ಕೆ ಪಾಲಿಕೆ ಪರಿಷ್ಕರಣೆಯ ವರದಿ ಅನುಮೋದನೆಗೆ ಕಳುಹಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು.

ಅದರಂತೆ ಪಾಲಿಕೆ ಆಡಳಿತ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ನಿಗದಿತ ಮಾನದಂಡದಲ್ಲಿ ವರದಿ ಸಲ್ಲಿಕೆಯಾಗದ ಕಾರಣ, ಡಿಸಿ ಕಚೇರಿಯಿಂದ ಮತ್ತೆ ಪಾಲಿಕೆಗೆ ವರದಿ ವಾಪಾಸ್ಸಾಗಿತ್ತು. ಈ ಪ್ರಕ್ರಿಯೆಯಲ್ಲಿಯೇ ಕೆಲ ತಿಂಗಳುಗಳು ಕಳೆದಿದ್ದವು.

ಕಳೆದೊಂದು ತಿಂಗಳ ಹಿಂದೆ ಪಾಲಿಕೆ ಆಡಳಿತವು ಮತ್ತೆ ಡಿಸಿ ಕಚೇರಿಗೆ ವರದಿ ಸಲ್ಲಿಸಿದೆ. ಸದರಿ ವರದಿಯ ಪರಿಶೀಲನೆ ನಡೆದು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ. ತದನಂತರ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯ ನಿರ್ಧಾರ ಕೈಗೊಳ್ಳಬೇಕಾಗಿದೆ.

ಡಿಸಿ ಗಮನಿಸಲಿ : 1995-96 ರಲ್ಲಿ ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಸರಿಸುಮಾರು 30 ವರ್ಷಗಳಿಂದ ಒಂದೇ ಒಂದು ಪ್ರದೇಶವನ್ನು ಹೊಸದಾಗಿ ನಗರ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿಲ್ಲ.

ಮತ್ತೊಂದೆಡೆ, ಶಿವಮೊಗ್ಗ ನಗರವು ದೇಶ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲೊಂದಾಗಿದೆ. ನಗರದ ಹೊರವಲಯದ ಪ್ರದೇಶಗಳಲ್ಲಿ ಹೊಸ ಹೊಸ ಜನವಸತಿ ಪ್ರದೇಶಗಳು ಅಭಿವೃದ್ದಿಗೊಂಡಿವೆ. ಕೈಗಾರಿಕೆ, ವಾಣಿಜ್ಯ, ಶೈಕ್ಷಣಿಕ, ಅಭಿವೃದ್ದಿ ಸೇರಿದಂತೆ ಹಲವು ಚಟುವಟಿಕೆಗಳು ಬೆಳವಣಿಗೆಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ.

ಆದರೆ ಗ್ರಾಮ ಪಂಚಾಯ್ತಿ ಅಧೀನದಲ್ಲಿರುವುದರಿಂದ ಸಮರ್ಪಕ ಮೂಲಸೌಕರ್ಯಗಳು ಲಭ್ಯವಾಗುತ್ತಿಲ್ಲ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಹಾಗೆಯೇ ಅವ್ಯವಸ್ಥಿತವಾಗಿ ನಗರ ಬೆಳವಣಿಗೆಯಾಗುವಂತಾಗಿದೆ. ಈ ಕಾರಣದಿಂದ ನಿಯಮಾನುಸಾರ ಅಭಿವೃದ್ದಿ ಹೊಂದಿರುವ ಪ್ರದೇಶಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಆಗ್ರಹ ನಾಗರೀಕರದ್ದಾಗಿತ್ತು.

ಆದರೆ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರನಿಧಿಗಳು ಅತೀವ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬಂದಿದ್ದರು. ಈ ಕಾರಣದಿಂದ ದಶಕಗಳಿಂದ ನಗರಾಡಳಿತ ವ್ಯಾಪ್ತಿ ವಿಸ್ತರಣೆಯಾಗಿಲ್ಲ. ಇದರಿಂದ ಈ ಹಿಂದೆ ಪರಿಷ್ಕರಣೆಗಿದ್ದ ಅವಕಾಶಗಳನ್ನು ಕೂಡ ಅಧಿಕಾರಿಗಳು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಸೂಕ್ತ ನಿರ್ಧಾರ ಕೈಗೊಂಡು, ರಾಜ್ಯ ಸರ್ಕಾರದ ಸಕ್ಷಮ ಇಲಾಖೆಗೆ ವರದಿ ರವಾನಿಸುವ ಕಾರ್ಯ ನಡೆಸಬೇಕು. ಈ ಮೂಲಕ ಶಿವಮೊಗ್ಗದ ಯೋಜನಾಬದ್ಧ ಬೆಳವಣಿಗೆಗೆ ತಮ್ಮ ಅವಧಿಯಲ್ಲಿ ಆದ್ಯ ಗಮನಹರಿಸಬೇಕು ಎಂಬುವುದು ನಗರದ ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.

*** ನಗರಗಳ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ನಿಯಮಿತವಾಗಿ ನಗರ – ಪಟ್ಟಣಗಳ ವ್ಯಾಪ್ತಿ ಪರಿಷ್ಕರಣೆ ಮಾಡಿಕೊಂಡು ಬರಲಾಗುತ್ತದೆ. ಆದರೆ ಶಿವಮೊಗ್ಗ ನಗರ ವ್ಯಾಪ್ತಿ ಮಾತ್ರ ಬರೋಬ್ಬರಿ ಸರಿಸುಮಾರು 30 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ! ನಗರಸಭೆಯಿಂದ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಉರುಳಿದರೂ ಪರಿಷ್ಕರಣೆಯಾಗಲಿ, ವಾರ್ಡ್ ಗಳ ಸಂಖ್ಯೆ ಹೆಚ್ಚಳವೂ ಆಗಿರಲಿಲ್ಲ. ದೇಶ – ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರ ಸ್ಥಾನ ಪಡೆದರೂ, ನಗರಾಡಳಿತ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿರಲಿಲ್ಲ. ಶಿವಮೊಗ್ಗ ಜಿಲ್ಲೆಯವರೇ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯ ಸರ್ಕಾರದ ಹಂತದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರೂ ಶಿವಮೊಗ್ಗ ನಗರಾಡಳಿತ ವಿಚಾರದಲ್ಲಿ ಮಾತ್ರ ಯಾವುದೇ ಜನಪರ ನಿರ್ಧಾರ ಕಾರ್ಯಗತವಾಗಿರಲಿಲ್ಲ. ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಇದೀಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

*** ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ನಡೆಸಿ, ಪ್ರಸ್ತುತವಿರುವ 35 ವಾರ್ಡ್ ಗಳನ್ನು ಕನಿಷ್ಠ 50 ಕ್ಕೆ ಏರಿಸಬೇಕು. ಈ ಮೂಲಕ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕು ಎಂಬುವುದು ನಾಗರೀಕರ ಆಗ್ರಹವಾಗಿದೆ. ಈ ಹಿಂದಿನ ನಗರಸಭೆ ಆಡಳಿತದಲ್ಲಿದ್ದ 35 ವಾರ್ಡ್ ಗಳನ್ನೇ, ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ವೇಳೆಯೂ ಮುಂದುವರಿಸಿಕೊಂಡು ಬರಲಾಗಿತ್ತು. ಕೆಲ ವಾರ್ಡ್ ಗಳು ಸಾಕಷ್ಟು ವಿಶಾಲ, ಜನಸಂಖ್ಯಾಬಾಹುಳ್ಯ ಹೊಂದಿವೆ. ಜನಸಂಖ್ಯೆ, ವ್ಯಾಪ್ತಿಗೆ ಅನುಗುಣವಾಗಿ ವಾರ್ಡ್ ಗಳ ಪರಿಷ್ಕರಣೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.

Shivamogga, May 12: The issue of revising the Shivamogga Municipal Corporation has come to the fore. In this regard, demands have started to be heard from the civic sector that the DC Gurudatta Hegde should take an appropriate decision and start working towards facilitating lakhs of citizens.

As per the instructions of the state government, the municipal corporation administration had started the process of revising the corporation’s jurisdiction last year. For this, a separate team of officers had been formed. The information was collected through drones.

shimoga | Details of vegetable prices for June 20 in Shivamogga APMC wholesale market shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 12 ರ ತರಕಾರಿ ಬೆಲೆಗಳ ವಿವರ
Shivamogga : Power outages in various places on June 17-18! ಶಿವಮೊಗ್ಗ : ಜೂ. 17 – 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ – ಮೇ 14 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ