Arrival of monsoon: Heavy rains in the Western Ghats! ಮುಂಗಾರು ಆಗಮನ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ!

shimoga | ಶಿವಮೊಗ್ಗ ನಗರದ ವಿವಿಧೆಡೆ ಧಾರಾಕಾರ ಮಳೆ!

ಶಿವಮೊಗ್ಗ (shivamogga), ಮೇ 13: ಶಿವಮೊಗ್ಗ ನಗರದ ವಿವಿಧೆಡೆ ಮೇ 13 ರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಯಿತು. ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದ್ದ ಇಳೆಯು ತಂಪಾಯಿತು.

ಕಳೆದ ಕೆಲ ದಿನಗಳಿಂದ ಮುಂಗಾರು ಪೂರ್ವ ಮಳೆ ಕಣ್ಮರೆಯಾಗಿತ್ತು. ಮತ್ತೊಂದೆಡೆ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಾಗಿತ್ತು. ಈ ನಡುವೆ ಮಂಗಳವಾರ ಸಂಜೆ ಬಿದ್ದ ಧಾರಾಕಾರ ಮಳೆ ನಾಗರಿಕರಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿತು.

ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿದ್ದ ಭಾರಿ ಮಳೆಯಿಂದ ನಗರದ ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ – ವಾಹನ ಸಂಚಾರಕ್ಕೆ ಧಕ್ಕೆಯಾಗುವಂತಾಯಿತು.

ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳವರೆಗೆ ಮಲೆನಾಡಿನ ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.

Shivamogga, May 13: Heavy rain accompanied by thunder and lightning lashed various parts of Shivamogga city on the evening of May 13. 

The pre-monsoon rains had disappeared for the past few days. On the other hand, the scorching heat had increased. Meanwhile, the torrential rains that fell on Tuesday evening brought a sigh of relief among the citizens.

shimoga | Shivamogga: What is the minister's instruction? What is the reason for the MLC and Commissioner's visit to Bommanakkatte? shimoga | ಶಿವಮೊಗ್ಗ : ಸಚಿವರ ಸೂಚನೆಯೇನು? ಬೊಮ್ಮನಕಟ್ಟೆಗೆ ಎಂಎಲ್ಸಿ ಆಯುಕ್ತರ ಭೇಟಿಗೆ ಕಾರಣವೇನು? Previous post shimoga | ಶಿವಮೊಗ್ಗ : ಸಚಿವರ ಸೂಚನೆಯೇನು? ಬೊಮ್ಮನಕಟ್ಟೆಗೆ ಎಂಎಲ್ಸಿ, ಆಯುಕ್ತರ ಭೇಟಿಗೆ ಕಾರಣವೇನು?
shimoga | Details of vegetable prices for June 20 in Shivamogga APMC wholesale market shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 14 ರ ತರಕಾರಿ ಬೆಲೆಗಳ ವಿವರ