
shimoga | ಭದ್ರಾವತಿ – ಚನ್ನಗಿರಿ – ಚಿಕ್ಕಜಾಜೂರು ನೂತನ ರೈಲ್ವೆ ಮಾರ್ಗ : ಅಂತಿಮ ಸಮೀಕ್ಷೆಗೆ ಒಪ್ಪಿಗೆ!
ಶಿವಮೊಗ್ಗ (shivamogga), ಮೇ 15: ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿಕ್ಕಜಾಜೂರಿಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷಾ ವರದಿ ಸಲ್ಲಿಕೆಗೆ ಕೇಂದ್ರದ ರೈಲ್ವೆ ಮಂಡಳಿ ಬುಧವಾರ ಒಪ್ಪಿಗೆ ನೀಡಿದೆ. ಅದಕ್ಕಾಗಿ ₹1.825 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಗುರುವಾರ ಸಂಸದರ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ. ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ ಗುಂತಕಲ್ ಮಾರ್ಗವಾಗಿ ಮಲೆನಾಡು, ಬಯಲು ಸೀಮೆ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ನಡುವೆ ನೇರ ಸಂಪರ್ಕವನ್ನು ಈ ರೈಲು ಮಾರ್ಗ ಬೆಸೆಯಲಿದೆ.
ಭದ್ರಾವತಿ – ಚಿಕ್ಕಜಾಜೂರು ನಡುವಿನ 73 ಕಿ.ಮೀ ದೂರದ ಈ ಮಾರ್ಗ ಪೂರ್ಣಗೊಂಡಲ್ಲಿ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಂದ ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರು ಪೂರೈಸಲು ನೆರವಾಗುವ ಜೊತೆಗೆ ವಿಐಎಸ್ ಎಲ್ ಕಾರ್ಖಾನೆಯ ಪುನಶ್ಚೇತನಕ್ಕೂ ಈ ರೈಲು ಮಾರ್ಗ ನೆರವಾಗಲಿದೆ.
ಈ ರೈಲು ಮಾರ್ಗ ನಿರ್ಮಾಣಕ್ಜೆ ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಸಮೀಕ್ಷೆ ಕಾರ್ಯ ಮುಗಿಯುತ್ತಿದ್ದಂತೆಯೇ ರೈಲು ಮಾರ್ಗ ನಿರ್ಮಾಣಕ್ಕೆ ಹಣ ಮೀಸಲಿರಿಸಿ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, May 15: The Central Railway Board on Wednesday approved the submission of the final site survey report for the new railway line connecting Bhadravati to Chikkajajuri via Channagiri. A sum of Rs 1.825 crore has been released for the same, said Lok Sabha member BY Raghavendra.
The MP’s office issued a statement in this regard on Thursday. This rail route will provide direct connectivity between Malnad, Bayalu Seema, Andhra Pradesh and Telangana via Shimoga, Bhadravati, Channagiri, Chikkajajur, Chitradurga, Bellary and Guntakal.