shimoga | Support for Pakistan: Turkish apples set on fire in protest in Shimoga! shimoga | ಪಾಕಿಸ್ತಾನಕ್ಕೆ ಬೆಂಬಲ : ಟರ್ಕಿ ದೇಶದ ಸೇಬು ಹಣ್ಣಿಗೆ ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ!\

shimoga | ಪಾಕಿಸ್ತಾನಕ್ಕೆ ಬೆಂಬಲ : ಟರ್ಕಿ ದೇಶದ ಸೇಬು ಹಣ್ಣಿಗೆ ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ!

ಶಿವಮೊಗ್ಗ (shivamogga), ಮೇ 17: ಇತ್ತೀಚೆಗೆ ಭಾರತವು ಪಾಕಿಸ್ತಾನದ ವಿರುದ್ದ ನಡೆಸಿದ ‘ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ, ಪಾಕ್ ಗೆ ಬೆಂಬಲ ವ್ಯಕ್ತಪಡಿಸಿದ ಟರ್ಕಿ ದೇಶದ ಕ್ರಮ ಖಂಡಿಸಿ, ಆ ದೇಶದಿಂದ ಆಮದು ಮಾಡಿಕೊಂಡ ಸೇಬುಹಣ್ಣುಗಳನ್ನು ದಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೇ 17 ರಂದು ಶಿವಮೊಗ್ಗದಲ್ಲಿ ನಡೆಯಿತು.

ನಗರದ ಮಹಾವೀರ ವೃತ್ತದಲ್ಲಿ, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಈ ಪ್ರತಿಭಟನೆ ನಡೆಸಿತು. ಟರ್ಕಿ ದೇಶದ ಸೇಬುಹಣ್ಣುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಹಿಸಿದ ಸಂಘಟನೆ ಮುಖಂಡರು, ಟರ್ಕಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟರ್ಕಿ ದೇಶದಲ್ಲಿ ಉಂಟಾದ ಪ್ರಾಕೃತಿಕ ವಿಪತ್ತಿನ ವೇಳೆ, ಭಾರತವು ಆ ದೇಶಕ್ಕೆ ನೆರವಿನಹಸ್ತ ಕಲ್ಪಿಸಿ ಮಾನವೀಯತೆ ಮೆರೆದಿತ್ತು. ಆದರೆ ಜಮ್ಮುಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ಅಮಾಯಕ ನಾಗರೀಕರ ನರಮೇಧ ಖಂಡಿಸಿ, ಇತ್ತೀಚೆಗೆ ಭಾರತವು ಪಾಕಿಸ್ತಾನ ವಿರುದ್ದ ಸಿಂಧೂರ್ ಸೇನಾ ಕಾರ್ಯಾಚರಣೆ ನಡೆಸಿತ್ತು. ಆ ದೇಶದಲ್ಲಿನ ಉಗ್ರಗಾಮಿಗಳ ನೆಲೆ ಧ್ವಂಸಗೊಳಿಸುವ ಕಾರ್ಯ ನಡೆಸಿತ್ತು.

ಈ ವೇಳೆ ಟರ್ಕಿ ದೇಶವು ಪಾಕ್ ಗೆ ಬೆಂಬಲ ವ್ಯಕ್ತಪಡಿಸಿತ್ತು. ಯುದ್ಧ ಸಾಮಾಗ್ರಿಗಳನ್ನು ನೀಡಿತ್ತು. ಟರ್ಕಿ ದೇಶದ ಭಾರತ ವಿರೋಧಿ ಕ್ರಮವು ಖಂಡನಾರ್ಹವಾದುದಾಗಿದೆ ಎಂದು ಸಂಘಟನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಟರ್ಕಿ ದೇಶದ ವಿರುದ್ದ ಭಾರತಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆ ದೇಶದೊಂದಿಗಿನ ವ್ಯಾಪಾರ, ವಹಿವಾಟು, ಪ್ರವಾಸ ನಿರ್ಬಂಧ ಕ್ರಮಗಳು ಜಾರಿಯಾಗುತ್ತಿರುವುದು ಸ್ವಾಗತಾರ್ಹವಾದುದಾಗಿದೆ ಎಂದು ಸಂಘಟನೆ ತಿಳಿಸಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಮುಖಂಡರಾದ ಹೆಚ್ ಎಂ ಸಂಗಯ್ಯ, ಶಂಕರನಾಯ್ಕ್, ಶಿವಣ್ಣ, ಸೋಮಶೇಖರಯ್ಯ, ಜನಮೇಜಿರಾವ್, ಆದಿಶೇಷ, ನಾರಾಯಣ ಸೇರಿದಂತೆ ಮೊದಲಾದವರಿದ್ದರು.

Shivamogga, May 17: An incident took place in Shivamogga on May 17, when people protested and burned apples imported from Turkey, condemning the country’s support for Pakistan during India’s recent military operation ‘Sindoor’ against Pakistan.

The protest was held by the Shantaveri Gopalagowda Samajwadi Study Centre Trust at Mahaveer Circle in the city. The leaders of the organization poured petrol on apples from Turkey and set them on fire, expressing their anger by shouting slogans against Turkey.

shimoga | Shivamogga: Power outage until 5 pm on May 21st! shimoga | ಶಿವಮೊಗ್ಗ : ಮೇ 21 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ! Previous post shimoga | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಮೇ 17 ರಂದು ವಿದ್ಯುತ್ ವ್ಯತ್ಯಯ
CM, DCM to Shivamogga : Citizens of the district demand implementation of their demandsಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ಬೇಡಿಕೆಗಳ ಕಾರ್ಯಗತಕ್ಕೆ ಜಿಲ್ಲೆಯ ನಾಗರೀಕರ ಆಗ್ರಹ Next post shimoga | ಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ನೆನೆಗುದಿಗೆ ಬಿದ್ದ ಬೇಡಿಕೆಗಳತ್ತ ಹರಿಯುವುದೆ ಚಿತ್ತ?