bengaluru rain | Capital city Bengaluru is shaking due to heavy rain! ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!

bengaluru rain | ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರ!

ಬೆಂಗಳೂರು (bangalore), ಮೇ 19: ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಬಿದ್ದ ಭಾರೀ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ನಾಗರೀಕರು ತತ್ತರಿಸಿ ಹೋಗಿದ್ದಾರೆ!

ಶಾಂತಿ ನಗರದಲ್ಲಿರುವ ಸಿಸಿಬಿ ಪೊಲೀಸ್ ಕಚೇರಿಗೆ ನೀರು ನುಗ್ಗಿದೆ. ಕೆಳಮಹಡಿ ಸಂಪೂರ್ಣ ಜಲಾವೃತವಾಗಿದೆ. ಕಚೇರಿಯ ಕೆಲ ದಾಖಲೆಗಳು ನೀರಿನಲ್ಲಿ ಹಾಳಾಗಿದೆ. ಕೊಳಚೆ ನೀರು ನುಗ್ಗಿರುವುದರಿಂದ ಇಡೀ ಕಚೇರಿ ದುರ್ವಾಸನೆಮಯವಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಈ ಕಾರಣದಿಂದ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈಜಿಪುರದ ಎ ಆರ್ ರಸ್ತೆಯಲ್ಲಿ ಹಲವು ಮನೆಗಳು ಜಲಾವೃತವಾಗಿವೆ. ಹಾಗೆಯೇ ನಾಗವಾರದ ನಂದಗೋಕುಲ ಬಡಾವಣೆಯಲ್ಲಿಯೂ ಮಳೆ ಅವಾಂತರ ಸೃಷ್ಟಿಸಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಉಳಿದಂತೆ ಭಾರೀ ಮಳೆಗೆ ಮೆಜೆಸ್ಟಿಕ್, ಆರ್ ಟಿ ನಗರ, ಜಯನಗರ, ವಿಜಯನಗರ, ಚಂದ್ರಾ ಲೇಔಟ್, ಕಾಮಾಕ್ಷಿಪಾಳ್ಯ, ಕೆ ಆರ್ ಮಾರುಕಟ್ಟೆ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತವಾಗಿರುವ ವರದಿಗಳು ಬಂದಿವೆ.

Bengaluru, May 19: The pre-monsoon rains continue to lash Bengaluru city. Heavy rains on Sunday night and Monday morning have left many areas of the city waterlogged. Citizens are reeling! #bengaluru, #bengalururain, #bangalore, #bengalururainalert, #bangalorerain, #rain, #ಮಳೆ, #ಬೆಂಗಳೂರು, #bengaluruflood,

shimoga | Shivamogga: Sale of ganja – Three arrested including a person from Madhya Pradesh state! shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್! Previous post shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್!
merchant murder case : Police shot a rowdy sheeter in the leg in Shimoga! ಅಡಕೆ ವ್ಯಾಪಾರಿ ಕೊಲೆ ಪ್ರಕರಣ : ಶಿವಮೊಗ್ಗದ ರೌಡಿಶೀಟರ್ ಕಾಲಿಗೆ ಪೊಲೀಸ್ ಗುಂಡೇಟು! Next post holehonnuru murder case | ಹೊಳೆಹೊನ್ನೂರು | ಅಡಕೆ ವ್ಯಾಪಾರಿ ಕೊಲೆ ಪ್ರಕರಣ : ಶಿವಮೊಗ್ಗದ ರೌಡಿಶೀಟರ್ ಕಾಲಿಗೆ ಪೊಲೀಸ್ ಗುಂಡೇಟು!