
shimoga rain alert | ಶಿವಮೊಗ್ಗ |ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಮೇ 20: ವಾಯುಭಾರ ಕುಸಿತದ ಪರಿಣಾಮದಿಂದ, ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಮಲೆನಾಡಿನ ವಿವಿಧೆಡೆ ಚದುರಿದಂತೆ ಭರ್ಜರಿ ಮಳೆಯಾಗುತ್ತಿದೆ. ಈ ನಡುವೆ ಮುಂದಿನ ಮೂರು ದಿನಗಳ ಕಾಲ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಮೇ 20 ರಿಂದ ಮೇ 23 ರವರೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮತ್ತೊಂದೆಡೆ ಮೇ 20 ರಂದು ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.
ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ನೆಲೆಸಿದೆ. ಮೇ 19 ರ ರಾತ್ರಿ ಶಿವಮೊಗ್ಗ ನಗರದ ಹಲವೆಡೆ ಸುಮಾರು ಅರ್ಧ ಗಂಟೆಯ ಕಾಲ ಉತ್ತಮ ಮಳೆಯಾಗಿತ್ತು.
ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ನೆಲೆಸಿತ್ತು. ಬೆಳಿಗ್ಗೆ 11 ಗಂಟೆಯ ನಂತರ ನಗರದ ಹಲವೆಡೆ ಗುಡುಗು ಸಹಿತ ಮಳೆಯಾಗಲಾರಂಭಿಸಿದೆ. ಮಳೆ ಕಾರಣದಿಂದ ಉಷ್ಣಾಂಶದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ತಂಪನೆ ವಾತಾವರಣ ನೆಲೆಸಿದೆ.
Shivamogga, May 20: Due to the impact of the low pressure area, the pre-monsoon rains have intensified. For the past few days, scattered heavy rains have been falling in various parts of the Malnad region. Meanwhile, heavy rains have been forecast in the Malnad region for the next three days.
The Meteorological Department has said that there is a possibility of heavy rains with thunderstorms in the coastal and Malnad regions from May 20 to May 23. On the other hand, a red alert has been issued for 6 districts in Malnad region, including Shivamogga and Chikkamagaluru, on May 20.