Shimoga Municipality | Shimoga Municipality area revision: DC Gurudatta Hegde takes important step! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಗುರುದತ್ತ ಹೆಗಡೆ ಮಹತ್ವದ ಕ್ರಮ!

shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮಹತ್ವದ ಸಭೆ!

ಶಿವಮೊಗ್ಗ (shivamogga), ಮೇ 21: ಸಂಪೂರ್ಣ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯದ ಕುರಿತಂತೆ ಚರ್ಚಿಸಲು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಹತ್ವದ ಸಭೆ ಕರೆದಿದ್ದಾರೆ.

‘ಮೇ 27 ಹಾಗೂ 28 ರಂದು ಪಾಲಿಕೆ ವ್ಯಾಪ್ತಿ ಗಡಿ ಪರಿಷ್ಕರಣೆ ಕುರಿತಂತೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪಾಲಿಕೆ ಆಡಳಿತ ಸಲ್ಲಿಸಿರುವ ಪ್ರಸ್ತಾವನೆಯ ಸಮಗ್ರ ಪರಿಶೀಲನೆ  ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ಮೇ 21 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸದರಿ ಸಭೆಯ ನಂತರ ಗ್ರಾಮ ಪಂಚಾಯ್ತಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸಲಾಗುವುದು. ತದನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ವಿಳಂಬ : 1994 – 95 ರಲ್ಲಿ ನಗರಸಭೆ ಆಡಳಿತದ ವೇಳೆ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ತದನಂತರ ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಉರುಳಿದರೂ ಇಲ್ಲಿಯವರೆಗೂ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ನಾಗರೀಕರ ಒತ್ತಾಯದ ಹೊರತಾಗಿಯೂ ಆಡಳಿತಗಾರರು ಇತ್ತ ಚಿತ್ತ ಹರಿಸುವ ಗೋಜಿಗೆ ಹೋಗಿರಲಿಲ್ಲ!

ಈ ನಡುವೆ ರಾಜ್ಯ ಸರ್ಕಾರದ ಸೂಚನೆಯಂತೆ, ಮಹಾನಗರ ಪಾಲಿಕೆ ಆಡಳಿತವು ಕಳೆದ ವರ್ಷ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿತ್ತು. ಡ್ರೋಣ್ ಮೂಲಕವು ಮಾಹಿತಿ ಸಂಗ್ರಹಿಸಿತ್ತು.

ಆದರೆ ಸದರಿ ಮಾಹಿತಿ ಸಂಗ್ರಹಣೆ ಕಾರ್ಯ ವಿಳಂಬವಾಗಿತ್ತು. ಈ ನಡುವೆ ಪಾಲಿಕೆ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ, ರಾಜ್ಯ ಸರ್ಕಾರಕ್ಕೆ ಪರಿಷ್ಕರಣೆಯ ವರದಿ ಅನುಮೋದನೆಗೆ ಕಳುಹಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು.

ಅದರಂತೆ ಪಾಲಿಕೆ ಆಡಳಿತ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ನಿಗದಿತ ಮಾನದಂಡದಲ್ಲಿ ವರದಿ ಸಲ್ಲಿಕೆಯಾಗದ ಕಾರಣ, ಡಿಸಿ ಕಚೇರಿಯಿಂದ ಮತ್ತೆ ಪಾಲಿಕೆಗೆ ವರದಿ ವಾಪಾಸ್ಸಾಗಿತ್ತು. ಈ ಪ್ರಕ್ರಿಯೆಯಲ್ಲಿಯೇ ಕೆಲ ತಿಂಗಳುಗಳು ಕಳೆದಿದ್ದವು. ಕಳೆದೊಂದು ತಿಂಗಳ ಹಿಂದೆ ಪಾಲಿಕೆ ಆಡಳಿತವು ಮತ್ತೆ ಡಿಸಿ ಕಚೇರಿಗೆ ವರದಿ ಸಲ್ಲಿಸಿದೆ. ಸದರಿ ವರದಿಯ ಪರಿಶೀಲನೆ ನಡೆದು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ. ತದನಂತರ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯ ನಿರ್ಧಾರ ಕೈಗೊಳ್ಳಬೇಕಾಗಿದೆ.

ನಿರೀಕ್ಷೆ : ಪಾಲಿಕೆ ಆಡಳಿತ ಸಲ್ಲಿಸಿರುವ ವರದಿಯ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು, ಹಿರಿಯ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದಾರೆ. ಇದರಿಂದ ನೆನೆಗುದಿಗೆ ಬಿದ್ದಿದ್ದ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಡಿಸಿ ಗುರುದತ್ ಹೆಗಡೆ ಅವರು ಶಿವಮೊಗ್ಗ ನಗರದ ಭವಿಷ್ಯದ ಬೆಳವಣಿಗೆ, ಮೂಲಸೌಕರ್ಯ ವ್ಯವಸ್ಥೆ, ಲಕ್ಷಾಂತರ ನಾಗರೀಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

*** ‘ಕಳೆದ ಸರಿಸುಮಾರು 30 ವರ್ಷಗಳಿಂದ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಇದು ಯೋಜನಾಬದ್ಧ ನಗರ ನಿರ್ಮಾಣದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಭಾರೀ ದೊಡ್ಡ ಸಂಖ್ಯೆಯ ವಸತಿ ಬಡಾವಣೆಗಳು ಅಭಿವೃದ್ದಿಯಾಗಿವೆ. ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ಬೆಳವಣಿಗೆಯಾಗಿವೆ. ಸಾವಿರಾರು ಜನ ವಾಸಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಆಡಳಿತದಿಂದ ಪರಿಣಾಮಕಾರಿ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸುತ್ತಿದೆ. ಈ ಕಾರಣದಿಂದ ಜನಸಂಖ್ಯೆ, ಪ್ರದೇಶಗಳ ಬೆಳವಣಿಗೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದ್ಯ ಗಮನಹರಿಸಬೇಕು. ಕಾಲಮಿತಿಯೊಳಗೆ ನಗರ ವ್ಯಾಪ್ತಿ ಪರಿಷ್ಕರಣೆಯ ನಿರ್ಧಾರ ಕೈಗೊಂಡು, ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ‘ನನ್ನ ಕನಸಿನ ಶಿವಮೊಗ್ಗ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಎನ್. ಗೋಪಿನಾಥ್ ಅವರು ಮನವಿ ಮಾಡಿದ್ದಾರೆ.

Shivamogga, May 21: The issue of revising the Shivamogga Municipal Corporation’s jurisdiction, which had been completely forgotten, has now come to the forefront of discussion again. District Collector Gurudatta Hegde has called an important meeting to discuss the issue of revising the corporation’s jurisdiction.

“A meeting of officials has been called on May 27 and 28 regarding the revision of the corporation’s jurisdictional boundaries. A comprehensive review of the proposal submitted by the corporation administration will be conducted in the meeting,” said District Collector Gurudatta Hegde.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 21 ರ ತರಕಾರಿ ಬೆಲೆಗಳ ವಿವರ
Diesel theft case from trucks: Two arrested from Shivamogga! ಲಾರಿಗಳ ಡೀಸೆಲ್ ಕಳವು ಪ್ರಕರಣ : ಶಿವಮೊಗ್ಗದ ಇಬ್ಬರ ಬಂಧನ! Next post shikaripura | ಶಿರಾಳಕೊಪ್ಪ | ಲಾರಿಗಳ ಡೀಸೆಲ್ ಕಳವು ಪ್ರಕರಣ : ಶಿವಮೊಗ್ಗದ ಇಬ್ಬರ ಬಂಧನ!