Shimoga | Police officer Nanjappa from Shimoga passes away! shimoga | ಶಿವಮೊಗ್ಗ ಮೂಲದ ಪೊಲೀಸ್ ಅಧಿಕಾರಿ ನಂಜಪ್ಪ ವಿಧಿವಶ!

shimoga | ಶಿವಮೊಗ್ಗ ಮೂಲದ ಪೊಲೀಸ್ ಅಧಿಕಾರಿ ನಂಜಪ್ಪ ವಿಧಿವಶ!

ಶಿವಮೊಗ್ಗ (shivamogga), ಮೇ 22: ಶಿವಮೊಗ್ಗ ಮೂಲದ ಪೊಲೀಸ್ ಅಧಿಕಾರಿ, ಹಾಲಿ ಕುಂದಾಪುರ ಟೌನ್ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ನಂಜಪ್ಪ (59) ಅವರು ತಡರಾತ್ರಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಲೀವರ್ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ನಂಜಪ್ಪ ಅವರು, ಕಳೆದೆರೆಡು ದಿನಗಳ ಹಿಂದೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಜಪ್ಪ ಅವರು ಶಿವಮೊಗ್ಗದವರಾಗಿದ್ದು, ಕಾಶೀಪುರ ಬಡಾವಣೆಯಲ್ಲಿ ಅವರ ಮನೆಯಿದೆ. ಸ್ಪೋರ್ಟ್ಸ್ ಕೋಟಾದಲ್ಲಿ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರ್ಪಡೆಯಾಗಿದ್ದರು. ಹಂತಹಂತವಾಗಿ ವಿವಿಧ ಹುದ್ದೆಗಳಿಗೆ ಮುಂಬಡ್ತಿ ಪಡೆದು, ಪ್ರಸ್ತುತ ಇನ್ಸ್’ಪೆಕ್ಟರ್ ಆಗಿದ್ದರು. ಶಿವಮೊಗ್ಗ ನಗರದ ವಿನೋಬನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಕುಂದಾಪುರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶಿವಮೊಗ್ಗ ನಗರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga, May 22: Nanjappa (59), a police officer from Shivamogga and currently serving as the Kundapur Town Inspector, passed away late last night due to illness. Nanjappa, who was suffering from a liver-related illness, was admitted to a private hospital in Udupi a couple of days ago.

Diesel theft case from trucks: Two arrested from Shivamogga! ಲಾರಿಗಳ ಡೀಸೆಲ್ ಕಳವು ಪ್ರಕರಣ : ಶಿವಮೊಗ್ಗದ ಇಬ್ಬರ ಬಂಧನ! Previous post shikaripura | ಶಿರಾಳಕೊಪ್ಪ | ಲಾರಿಗಳ ಡೀಸೆಲ್ ಕಳವು ಪ್ರಕರಣ : ಶಿವಮೊಗ್ಗದ ಇಬ್ಬರ ಬಂಧನ!
Tribute : 'KP Chinnappa Hegde was a role model for engineers..'Written by: B. S. Balakrishna, retired Superintending Engineer, PWD. Next post ನುಡಿ ನಮನ : ‘ಎಂಜಿನಿಯರ್ ಗಳಿಗೆ ಆದರ್ಶಪ್ರಾಯರಾಗಿದ್ದ ಕೆ ಪಿ ಚಿನ್ನಪ್ಪ ಹೆಗ್ಡೆ…’