The Assistant Executive Engineer has appealed to the public to cooperate with the board in the announcement.

shimoga | ಶಿವಮೊಗ್ಗ – ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?

ಶಿವಮೊಗ್ಗ (shivamogga), ಮೇ 23 : ವಿದ್ಯುತ್ ಪೂರೈಕೆ ವ್ಯತ್ಯಯದ ಹಿನ್ನೆಲೆಯಲ್ಲಿ, ಮೇ 25 ಹಾಗೂ ಮೇ 26 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತಿಳಿಸಿದೆ.

ಈ ಕುರಿತಂತೆ ಶುಕ್ರವಾರ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನಗರದ ಕೃಷ್ಣ ರಾಜೇಂದ್ರ ಜಲ ಶುದ್ಧೀಕರಣ ಘಟಕಕ್ಕೆ, ಮೆಸ್ಕಾಂನಿಂದ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 25 ಮತ್ತು 26 ರಂದು ನಗರದ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗಲಿದೆ ಎಂದು ಹೇಳಿದ್ದಾರೆ.  

ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Shivamogga, May 23: The Karnataka Urban Water Supply and Sewerage Board has announced that there will be disruptions in the daily drinking water supply in Shivamogga city on May 25 and May 26 due to power supply disruptions. This was informed in a statement issued by the board’s Assistant Executive Engineer Mithun Kumar on Friday.

He said that the city’s daily drinking water supply will be disrupted on May 25 and 26 due to the disruption of power supply from MESCOM to the city’s Krishna Rajendra Water Purification Plant. The Assistant Executive Engineer has appealed to the public to cooperate with the board in the announcement.

Shimoga : Power outage at various places on July 17 ಶಿವಮೊಗ್ಗ : ಜುಲೈ 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Previous post shimoga | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಮೇ 25 ರಂದು ವಿದ್ಯುತ್ ವ್ಯತ್ಯಯ!
shimoga | Shivamogga Municipal Corporation Election: Important statement by the State Election Commissioner! bshimoga | ಶಿವಮೊಗ್ಗ ಮಹಾನಗರ ಪಾಲಿಕೆ ಎಲೆಕ್ಷನ್ : ರಾಜ್ಯ ಚುನಾವಣಾ ಆಯುಕ್ತರ ಮಹತ್ವದ ಹೇಳಿಕೆ! Next post shimoga | ಶಿವಮೊಗ್ಗ ಮಹಾನಗರ ಪಾಲಿಕೆ ಎಲೆಕ್ಷನ್ : ರಾಜ್ಯ ಚುನಾವಣಾ ಆಯುಕ್ತರ ಮಹತ್ವದ ಹೇಳಿಕೆ!