shimoga rain | Huge amount of water released from Tunga Dam: Flood threat in low-lying areas of the riverbed of Shimoga! shimoga rain | ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ : ಶಿವಮೊಗ್ಗದ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ!

shimoga tunga dam | ಶಿವಮೊಗ್ಗ : ಬೇಸಿಗೆ ಮಳೆಗೆ ಗರಿಷ್ಠ ಮಟ್ಟದತ್ತ ತುಂಗಾ ಡ್ಯಾಂ..!

ಶಿವಮೊಗ್ಗ (shivamogga), ಮೇ 24: ಮಲೆನಾಡಿನಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ನಡುವೆ ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿರುವ ಶಿವಮೊಗ್ಗ ತಾಲೂಕಿನ ತುಂಗಾ ಡ್ಯಾಂ ಮಳೆಗಾಲ ಆರಂಭಕ್ಕೂ ಮುನ್ನವೇ ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ!

ಮೇ 24 ರ ಬೆಳಿಗ್ಗೆಯ ಮಾಹಿತಿಯಂತೆ, ತುಂಗಾ ಜಲಾಶಯದ ನೀರಿನ ಮಟ್ಟ 587. 84 (ಗರಿಷ್ಠ ಮಟ್ಟ : 588. 24 ) ಮೀಟರ್ ಇದೆ. 261 ಕ್ಯೂಸೆಕ್ ಒಳಹರಿವಿದೆ ಎಂದು ತುಂಗಾ ಡ್ಯಾಂ ಎಂಜಿನಿಯರ್ ತಿಪ್ಪಾನಾಯ್ಕ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಕೇವಲ ಸುಮಾರು 1 ಅಡಿಯಷ್ಟು ನೀರು ಬಾಕಿಯಿದೆ. ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಚುರುಕುಗೊಂಡಿರುವುದರಿಂದ, ಶೀಘ್ರವೇ ಡ್ಯಾಂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ.

ಜಲಾಶಯದ ನೀರು ಸಂಗ್ರಹಣ ಸಾಮರ್ಥ್ಯ 3. 24 ಟಿಎಂಸಿಯಾಗಿದೆ. 22 ಕ್ರಸ್ಟ್ ಗೇಟ್ ಗಳಿವೆ. ಮಲೆನಾಡು ಭಾಗದ ಪ್ರಮುಖ ಜಲಾಶಯಗಳಲ್ಲೊಂದಾಗಿದೆ.

ಮಳೆ ಚುರುಕು : ವಾಯುಭಾರ ಕುಸಿತದ ಪರಿಣಾಮದಿಂದ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಗಾಲದ ವಾತಾವರಣ ಕಂಡುಬಂದಿದೆ. ತಾಪಮಾನದ ಪ್ರಮಾಣದಲ್ಲಿ ದಿಢೀರ್ ಕುಸಿತವಾಗಿದೆ.

ತುಂಗಾ ಜಲಾಶಯದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಕಾರಣದಿಂದ ತುಂಗಾ ಡ್ಯಾಂನ ಒಳಹರಿವು ಹೆಚ್ಚಿದೆ. ಈ ಕಾರಣದಿಂದ ಯಾವ ಸಮಯದಲ್ಲಾದರೂ ತುಂಗಾ ಡ್ಯಾಂನಿಂದ ನೀರು ಹೊರಬಿಡುವ ಸಾಧ್ಯತೆಯಿದೆ. ಈ ಕಾರಣದಿಂದ ತುಂಗಾ ಡ್ಯಾಂ ಕೆಳಭಾಗದ ನದಿ ಪಾತ್ರದಲ್ಲಿ ಸಾರ್ವಜನಿಕರು ಯಾವುದೇ ಚಟುವಟಿಕೆ ನಡೆಸಬಾರದು. ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಪ್ರಕಟಣೆಯಲ್ಲಿ ತಿಳಿಸಿದೆ.

Shivamogga, May 24: Pre-monsoon rains have intensified in Malnad. It has been raining well for the past few days. Meanwhile, the Tunga Dam in Shivamogga taluk, which has a small reach and area, has started reaching its maximum level!

As of the morning of May 24, the water level in the Tunga reservoir is 587.84 (maximum level: 588.24) feet. There is an inflow of 261 cusecs, Tunga Dam Engineer Tippanaik told reporters who contacted him.

shimoga | Shivamogga Municipal Corporation Election: Important statement by the State Election Commissioner! bshimoga | ಶಿವಮೊಗ್ಗ ಮಹಾನಗರ ಪಾಲಿಕೆ ಎಲೆಕ್ಷನ್ : ರಾಜ್ಯ ಚುನಾವಣಾ ಆಯುಕ್ತರ ಮಹತ್ವದ ಹೇಳಿಕೆ! Previous post shimoga | ಶಿವಮೊಗ್ಗ ಮಹಾನಗರ ಪಾಲಿಕೆ ಎಲೆಕ್ಷನ್ : ರಾಜ್ಯ ಚುನಾವಣಾ ಆಯುಕ್ತರ ಮಹತ್ವದ ಹೇಳಿಕೆ!
shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ! Next post shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!