
shimoga tunga dam | ಶಿವಮೊಗ್ಗ | ತುಂಗಾ ಡ್ಯಾಂನಿಂದ 1 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!
ಶಿವಮೊಗ್ಗ (shivamogga), ಮೇ 25: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ಹಲವೆಡೆ ಆರ್ಭಟಿಸುತ್ತಿದೆ. ಈ ನಡುವೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ನೀರಿನ ಸಂಗ್ರಹ 588.24 ಮೀಟರ್ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ, ಮೇ 25 ರ ಬೆಳಿಗ್ಗೆಯಿಂದ ಡ್ಯಾಂನಿಂದ ನೀರು ಹೊರ ಹರಿಸಲಾಗುತ್ತಿದೆ.
‘ಡ್ಯಾಂನಿಂದ 1 ಸಾವಿರ ಕ್ಯೂಸೆಕ್ ನೀರನ್ನು ಪವರ್ ಹೌಸ್ ಮೂಲಕ ನದಿಗೆ ಹೊರ ಬಿಡಲಾಗುತ್ತಿದೆ. ಸದ್ಯ ಡ್ಯಾಂನ ಒಳಹರಿವು 5 ಸಾವಿರ ಕ್ಯೂಸೆಕ್ ಇದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ’ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ತಿಪ್ಪನಾಯ್ಕ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ಧಾರೆ.
ತುಂಗಾ ಜಲಾಶಯವು 3.24 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಅತ್ಯಂತ ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿದೆ. ಪ್ರತಿ ಮಳೆಗಾಲದ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲಿಗೆ ಭರ್ತಿಯಾಗುವ ಜಲಾಶಯವಾಗಿದೆ.
ಏರಿಕೆ : ಮತ್ತೊಂದೆಡೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿಯೂ ಏರಿಕೆ ಕಂಡುಬಂದಿದೆ. ಭಾನುವಾರದ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 10,954 ಕ್ಯೂಸೆಕ್ ಇದೆ. ಡ್ಯಾಂನ ನೀರಿನ ಮಟ್ಟ 1764 (ಗರಿಷ್ಠ ಮಟ್ಟ : 1819) ಅಡಿಯಿದೆ.
Shivamogga, May 25: Rains continue in the Malnad region. Meanwhile, the Tunga reservoir in Gajanur, Shivamogga taluk, has filled up. As the water storage has reached its maximum level of 588.24 meters, water is being released from the dam since the morning of May 25.
“1,000 cusecs of water is being released from the dam into the river through the power house. Currently, the inflow into the dam is 5,000 cusecs,” Dam Engineer Tippanaik told reporters who contacted him.
There has also been an increase in the inflow of the Linganamakki reservoir, the state’s major hydroelectric power generation center. As of Sunday morning, the inflow of the dam is 10,954 cusecs. The water level in the dam is 1764 feet (maximum level: 1819).