Monsoon rain : Jog Falls attracting tourists! jogfalls | ಮುಂಗಾರು ಮಳೆ : ಜೋಗ ಜಲಪಾತಕ್ಕೆ ಜೀವ ಕಳೆ! #shimoga #shivamogga #sagara #jogfalls

jogfalls | ಮುಂಗಾರು ಮಳೆ : ಜೋಗ ಜಲಪಾತಕ್ಕೆ ಜೀವ ಕಳೆ!

ಶಿವಮೊಗ್ಗ (shimoga), ಮೇ 25: ರಣ ಬಿಸಿಲು ಕಂಡುಬರುವ ಮೇ ತಿಂಗಳಲ್ಲಿಯೇ, ಮಳೆಗಾಲದ ವಾತಾವರಣ ನೆಲೆಸಿದೆ. ಸುಮಾರು 15 ದಿನಕ್ಕೂ ಮೊದಲೇ ಮುಂಗಾರು ಮಳೆಯ ಆಗಮನವಾಗಿದೆ. ಮಲೆನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಮಳೆ ಬಿರುಸುಗೊಳ್ಳಲಾರಂಭಿಸಿದೆ.

ಶರಾವತಿ ಕಣಿವೆಯ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಇದರಿಂದ ನೀರಿನಲ್ಲದೆ ಸೊರಗಿದ್ದ, ಕಲ್ಲು ಬಂಡೆಗಳಿಂದ ಗೋಚರವಾಗುತ್ತಿದ್ದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವ ಕಳೆ ಬಂದಿದೆ. ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ.

ರಾಜ, ರಾಣಿ, ರೋರರ್‌, ರಾಕೆಟ್‌ ಜಲಪಾತಗಳು ಜಲಧಾರೆಯಿಂದ ಭೋರ್ಗರೆಯುತ್ತ ಧುಮ್ಮಿಕ್ಕಲಾರಂಭಿಸಿವೆ. ಜಲ ವೈಭೋಗ ವೀಕ್ಷಿಸಲು ಪ್ರವಾಸಿಗರು ಜೋಗದತ್ತ ದೌಡಾಯಿಸಲಾರಂಭಿಸಿದ್ದಾರೆ.

ಪ್ರಸ್ತುತ ಜಲಪಾತದ ಬಳಿ ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಪ್ರವೇಶ ದ್ವಾರದ ಕಾಮಗಾರಿ ಕಾರಣದಿಂದ, ಕೆಲ ತಿಂಗಳುಗಳ ಹಿಂದೆ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಮೇ 1 ರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ.

‘ಈಗಾಗಲೇ ಮೇ 1 ರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಮಳೆಯಾಗುತ್ತಿರುವ ಕಾರಣದಿಂದ ಕಳೆದ ಶನಿವಾರ ಹಾಗೂ ಭಾನುವಾರದಂದು, ಪ್ರತಿನಿತ್ಯ ಸರಾಸರಿ 4 ರಿಂದ 5 ಸಾವಿರದಷ್ಟು ಪ್ರವಾಸಿಗರು ಜಲಪಾತದ ಸೊಬಗು ಕಣ್ತುಂಬಿಕೊಂಡಿದ್ದಾರೆ. ಮಳೆ ಮುಂದುವರಿದರೆ, ಪ್ರವಾಸಿಗರ ಸಂಖ್ಯೆ ಮತ್ತಷ್ಟ ಹೆಚ್ಚಾಗಲಿದೆ’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಧರ್ಮಪ್ಪ ಅವರು ಮೇ 26 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Shimoga, May 25: Even in the month of May, when the sun is shining, the rainy season has set in. The monsoon has arrived about 15 days early. There is good rain across the hilly region, and the rain is starting to get heavier day by day.

The Sharavati Valley region is also receiving good rains. This has brought life back to the world-famous Jog Falls, which was devoid of water and visible through rocks. It has started attracting tourists.

Raja, Rani, Roarer and Rocket waterfalls have started gushing with water. Tourists have started running towards Jogfalls to witness the water spectacle.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 26 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 27 ರ ತರಕಾರಿ ಬೆಲೆಗಳ ವಿವರ