Monsoon rains in Malnad: Increase in inflow to Tungಅ Bhadra and Linganamakki dams! ಮಲೆನಾಡಲ್ಲಿ ಮುಂಗಾರು ಮಳೆ : ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಂಗಳ ಒಳಹರಿವಿನಲ್ಲಿ ಹೆಚ್ಚಳ!

shimoga rain alert | ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸು : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂ ಒಳಹರಿವೆಷ್ಟು?

ಶಿವಮೊಗ್ಗ (shivamogga), ಮೇ 27: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ರಮೇಣ ಚುರುಕುಗೊಳ್ಳಲಾರಂಭಿಸಿದೆ. ಮುಂದಿನ ಕೆಲ ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಮೇ 27 ರಂದು ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.

ಪ್ರಸ್ತುತ ವರ್ಷ ಸುಮಾರು 15 ದಿನ ಮುಂಚಿತವಾಗಿ ಮುಂಗಾರು ಮಳೆಯ ಆಗಮನವಾಗಿದೆ. ಪ್ರಾರಂಭದಲ್ಲಿಯೇ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯ, ಕೆರೆಕಟ್ಟೆಗಳಿಗೆ ನೀರು ಹರಿದು ಬರಲಾರಂಭಿಸಿದೆ.

ಮಳೆ ವಿವರ : ಮಂಗಳವಾರ ಬೆಳಿಗ್ಗೆ 8. 30 ಕ್ಕೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಬಿದ್ದ ಮಳೆ ವಿವರ ಮುಂದಿನಂತಿದೆ.

ಆಗುಂಬೆಯಲ್ಲಿ 107 ಮಿಲಿ ಮೀಟರ್ (ಮಿ.ಮೀ), ಮಾಣಿಯಲ್ಲಿ 69 ಮಿ.ಮಿ, ಯಡೂರು 54 ಮಿ.ಮೀ, ಹುಲಿಕಲ್ 77 ಮೀ.ಮಿ,  ಮಾಸ್ತಿಕಟ್ಟೆ 65 ಮಿ.ಮೀ, ಚಕ್ರಾ 63 ಮಿ.ಮೀ, ಸಾವೇಹಕ್ಲುವಿನಲ್ಲಿ 66 ಮಿ.ಮೀ ಮಳೆಯಾಗಿದೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಡ್ಯಾಂನ ಒಳಹರಿವು 9548 ಕ್ಯೂಸೆಕ್ ಇದೆ. 6413 ಕ್ಯೂಸೆಕ್ ಹೊರಹರಿವಿದೆ. ಪ್ರಸ್ತುತ ನೀರಿನ ಮಟ್ಟ 1765.10 (ಗರಿಷ್ಠ ಮಟ್ಟ : 1819) ಅಡಿಯಿದೆ.

ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿರುವುದರಿಂದ ತುಂಗಾ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ. ಸದ್ಯ 11,200 ಕ್ಯೂಸೆಕ್ ಒಳಹರಿವಿದೆ. ಡ್ಯಾಂ ಗರಿಷ್ಠ ಮಟ್ಟವಾದ 588. 24 ಮೀಟರ್ ನೀರು ಸಂಗ್ರಹವಾಗಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಡ್ಯಾಂನ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ಹೊರ ಹರಿಸಲಾಗುತ್ತಿದೆ.

ಉಳಿದಂತೆ ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ನೀರಿನ ಮಟ್ಟ 137. 8 (ಗರಿಷ್ಠ ಮಟ್ಟ : 186) ಅಡಿಯಿದೆ. 3034 ಕ್ಯೂಸೆಕ್ ಒಳಹರಿವಿದೆ. ಅವಧಿಗೂ ಮುನ್ನವೇ ಮುಂಗಾರು ಮಳೆ ಆರಂಭವಾಗಿರುವುದರಿಂದ, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೂ ಚಾಲನೆ ದೊರಕಿದೆ.

Shivamogga, May 27: Monsoon rains have gradually started to intensify in Shivamogga district. The Indian Meteorological Department has said that there will be widespread rains for the next few days and has issued a red alert on May 27. This year, the monsoon has arrived about 15 days early. The Malnad region is receiving good rainfall right from the start. Water has started flowing into the reservoirs and lakes.

Rainfall details: As of 8.30 am on Tuesday, the rainfall details in major areas of the Western Ghats range of the district in the last 24 hours are as follows. Agumbe received 107 millimeters (mm), Mani 69 mm, Yadoor 54 mm, Hulikal 77 mm, Mastikatte 65 mm, Chakra 63 mm and Savehaklu received 66 mm.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 27 ರ ತರಕಾರಿ ಬೆಲೆಗಳ ವಿವರ
Shimoga : Power outage at various places on July 17 ಶಿವಮೊಗ್ಗ : ಜುಲೈ 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Next post shimoga | ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಮೇ 28 ರಂದು ವಿದ್ಯುತ್ ವ್ಯತ್ಯಯ!