shimoga | What are the areas included in the Shivamogga Municipal Corporation's jurisdiction? What are the demands of the citizens for the DC? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಲ್ಲಿರುವ ಪ್ರದೇಶಗಳು ಯಾವುವು? ಡಿಸಿಗೆ ನಾಗರೀಕರ ಆಗ್ರಹವೇನು? ವರದಿ : ಬಿ. ರೇಣುಕೇಶ್ b renukesha

shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಲ್ಲಿರುವ ಪ್ರದೇಶಗಳು ಯಾವುವು? ಡಿಸಿಗೆ ನಾಗರೀಕರ ಆಗ್ರಹವೇನು?

ಶಿವಮೊಗ್ಗ (shivamogga), ಮೇ 28: ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಪಾಲಿಕೆ ಆಡಳಿತ ಸಿದ್ದಪಡಿಸಿರುವ ವರದಿಯ ಕುರಿತಂತೆ, ಮೇ 27 ರಂದು ಡಿಸಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಮಹತ್ವದ ಸಭೆ ನಡೆದಿದೆ.

ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕು ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಕ್ಷೇತ್ರಗಳ ಶಾಸಕರು, ಆಯಾ ಗ್ರಾಮ ಪಂಚಾಯ್ತಿಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ 15 ದಿನದೊಳಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಒಟ್ಟಾರೆ ಶಿವಮೊಗ್ಗ ನಗರದ ಹೊರವಲಯದಲ್ಲಿರುವ 9 ಗ್ರಾಮ ಪಂಚಾಯ್ತಿಗಳ 19 ಹಳ್ಳಿಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಪಾಲಿಕೆ ಆಡಳಿತ ವರದಿ ಸಿದ್ದಪಡಿಸಿದೆ. ಪ್ರಸ್ತಾವಿತ ಪ್ರದೇಶಗಳ ವಿವರ ಈ ಕೆಳಕಂಡಂತಿದೆ.

ಕೋಟೆಗಂಗೂರು ಗ್ರಾಮ ಪಂಚಾಯ್ತಿ (ಗ್ರಾ.ಪಂ.) : ಕೋಟೆಗಂಗೂರು ಗ್ರಾಮ. ಅಬ್ಬಲಗೆರೆ ಗ್ರಾ.ಪಂ. : ಅಬ್ಬಲಗೆರೆ, ಚನ್ನಮುಂಬಾಪುರ, ಮತ್ತೋಡು, ಮೋಜಪ್ಪನ ಹೊಸೂರು.

ಮುದ್ದಿನಕೊಪ್ಪ ಗ್ರಾ.ಪಂ. : ವಿರುಪಿನಕೊಪ್ಪ, ಶ್ರೀರಾಮಪುರ. ಮೇಲಿನ ಹನಸವಾಡಿ ಗ್ರಾ.ಪಂ. : ಗೋಂಧಿಚಟ್ನಹಳ್ಳಿ.  ನಿದಿಗೆ ಗ್ರಾ. ಪಂ. : ದುಮ್ಮಳ್ಳಿ, ನಿದಿಗೆ, ಮಾಚೇನಹಳ್ಳಿ.

ಪುರದಾಳು ಗ್ರಾ. ಪಂ. : ಗುಡ್ಡದಅರಕೆರೆ, ಅನುಪಿನಕಟ್ಟೆ, ತ್ಯಾವರೆಕೊಪ್ಪ. ಸಂತೆಕಡೂರು ಗ್ರಾ. ಪಂ. : ಸಂತೆಕಡೂರು, ರಾಮಪುರ, ಹೊಸಹಳ್ಳಿ ಗ್ರಾ.ಪಂ. : ಹೊಸಹಳ್ಳಿ. ಅಗಸವಳ್ಳಿ ಗ್ರಾ.ಪಂ. : ಗೋವಿಂದಾಪುರ, ಕಲ್ಲೂರು.

After almost 30 years, the process of revising the Shivamogga municipal administration has been initiated. An important meeting of officials was held on May 27 under the chairmanship of DC Gurudatta Hegde regarding the report prepared by the corporation administration. The Corporation has prepared a report on the administration of 19 villages in 9 Gram Panchayats on the outskirts of Shivamogga city, regarding the inclusion of them in the Corporation’s jurisdiction. The details of the proposed areas are as follows.

Kotegangur Gram Panchayat : Kotegangur village. Abbalagere Gram Panchayat : Abbalagere, Channamumbapur, Mattodu, mojappana hosuru,

Muddinakoppa Gram Panchayat: Virupinakoppa, Srirampur. Melina Hanasavadi Gram Panchayat : Gondhichatnahalli. Nidige Gram Panchayat: Dummalli, Nidige, Machenahalli.

Puradalu Gram Panchayat : Guddadaarakere, Anupinakatte, Tyawarekoppa. Santekadur Gram Panchayat : Santekadur, Rampur, Hosahalli. Gram Panchayat : Hosahalli. Agasavalli Gram Panchayat : Govindapur, Kallur.

*** ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯು ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಪಂ ಆಗಿದೆ. ಸಾಕಷ್ಟು ವ್ಯಾಪ್ತಿ, ವಿಸ್ತೀರ್ಣ ಹೊಂದಿದೆ. ಸದ್ಯ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದಪಡಿಸಿರುವ ಪಟ್ಟಿಯಲ್ಲಿ ಸದರಿ ಗ್ರಾಪಂನ ಅಬ್ಬಲಗೆರೆ, ಚನ್ನಮುಂಬಾಪುರ, ಮತ್ತೋಡು, ಮೋಜಪ್ಪನ ಹೊಸೂರು ಗ್ರಾಮಗಳ ಹೆಸರಿದೆ.

ಆದರೆ ನಗರಕ್ಕೆ ಹೊಂದಿಕೊಂಡಂತಿರುವ ಅತೀ ದೊಡ್ಡ ಗ್ರಾಮ ಹಾಗೂ ಸಾಕಷ್ಟು ಬಡಾವಣೆಗಳ್ನು ಹೊಂದಿರುವ ಬಸವನಗಂಗೂರು ವ್ಯಾಪ್ತಿಯ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಸದರಿ ಗ್ರಾಮ ವ್ಯಾಪ್ತಿಯ ಕೆಲ ಬಡಾವಣೆಗಳ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದಾರೆ.

‘ಬಸವನಗಂಗೂರು ಗ್ರಾಮ ವ್ಯಾಪ್ತಿಯಲ್ಲಿರುವ ಕೆ ಹೆಚ್ ಬಿ ಪ್ರೆಸ್ ಕಾಲೋನಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಹೊಂದಿಕೊಂಡಂತಿವೆ. ಈಗಾಗಲೇ ಕೆ ಹೆಚ್ ಬಿ ಕಾಲೋನಿಯ ಸೋಮಿನಕೊಪ್ಪ ಸರ್ವೇ ನಂಬರ್ ನ ಪ್ರದೇಶ ಪಾಲಿಕೆ ವ್ಯಾಪ್ತಿಯಲ್ಲಿದೆ. ಇನ್ನರ್ಧ ಭಾಗ ಗ್ರಾಪಂ ಅಧೀನದಲ್ಲಿದೆ.

ಈ ಕಾರಣದಿಂದ ಪ್ರೆಸ್ ಕಾಲೋನಿ ಉಳಿದ ಭಾಗವನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು.ಇಡೀ ಗ್ರಾಮ ಸೇರ್ಪಡೆ ಸಾಧ್ಯವಾಗದಿದ್ದರೆ, ಸದರಿ ಗ್ರಾಮ ವ್ಯಾಪ್ತಿಯಲ್ಲಿ ಅಭಿವೃದ್ದಿ ಹೊಂದಿರುವ ಬಡಾವಣೆಗಳ ಸೇರ್ಪಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ಥಳ ಪರಿಶೀಲನೆ ನಡೆಸಿ, ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಈ ಸಂಬಂಧ ಮುಖ್ಯಮಂತ್ರಿ ಸೇರಿದಂತೆ ಪೌರಾಡಳಿತ ಹಾಗೂ ನಗರಾಭಿವೃದ್ದಿ ಸಚಿವರಿಗೆ ಮನವಿ ಅರ್ಪಿಸಲಾಗುವುದು’ ಎಂದು ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿ ಪತ್ರಕರ್ತ ಬಿ. ರೇಣುಕೇಶ್ ಅವರು ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ, ಖ್ಯಾತ ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ವಕೀಲರಾದ ವಿ. ಮಂಜುನಾಥ್

*** ‘ಹಲವು ದಶಕಗಳ ನಂತರ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹವಾಗಿದೆ. ಆದರೆ ವೈಜ್ಞಾನಿಕವಾಗಿ ನಗರ ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ. ನಗರದಂಚಿನಲ್ಲಿ ಅಭಿವೃದ್ದಿ ಹೊಂದಿರುವ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ. ಇಡೀ ಗ್ರಾಮ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗದ ವೇಳೆ, ಸದರಿ ಗ್ರಾಮದಲ್ಲಿ ಅಭಿವೃದ್ದಿ ಹೊಂದಿರುವ ಹಾಗೂ ನಗರಕ್ಕೆ ಹೊಂದಿಕೊಂಡಂತಿರುವ ಬಡಾವಣೆಗಳನ್ನು ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಅಭಿಪ್ರಾಯ ಪಡೆದು ಜಿಲ್ಲಾಡಳಿತ ಮುನ್ನಡೆಯಬೇಕು. ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದ್ಯ ಗಮನಹರಿಸಬೇಕು. ಖುದ್ದು ಸ್ಥಳ ಪರಿಶೀಲನೆ ನಡೆಸಿ ಮುನ್ನಡೆಯಬೇಕು’ ಎಂದು ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ, ಖ್ಯಾತ ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ವಕೀಲರಾದ ವಿ. ಮಂಜುನಾಥ್ ಅವರು ಸಲಹೆ ನೀಡುತ್ತಾರೆ.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 28 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 29 ರ ತರಕಾರಿ ಬೆಲೆಗಳ ವಿವರ