Pothole hazard on Shivamogga - Flyover road: Is PWD paying attention? ಶಿವಮೊಗ್ಗ - ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ ಗಂಡಾಂತರ : ಗಮನಹರಿಸುವುದೆ ಪಿಡಬ್ಲ್ಯೂಡಿ?

shimoga | ಶಿವಮೊಗ್ಗ – ಕಾಶೀಪುರ ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ ಗಂಡಾಂತರ : ಗಮನಿಸುವುದೆ ಪಿಡಬ್ಲ್ಯೂಡಿ?

ಶಿವಮೊಗ್ಗ (shivamogga), ಮೇ 29: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಮೇಲ್ಸುತುವೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಯು, ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ನಾಗರೀಕರು ದೂರಿದ್ದಾರೆ.

ಕಳೆದ ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಸುಗಮ ವಾಹನ ಸಂಚಾರಕ್ಕೆ ಅಡೆತಡೆಯಾಗಿ ಪರಿಣಮಿಸುತ್ತಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿದೆ. ಸದರಿ ಗುಂಡಿ ಕಾರಣದಿಂದಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಸ್ತುತ ಮಳೆಯಾಗುತ್ತಿರುವುದರಿಂದ ಸದರಿ ಗುಂಡಿಯಲ್ಲಿ ನೀರು ತುಂಬಿಕೊಂಡು, ರಾತ್ರಿ ವೇಳೆ ಸವಾರರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣವೇ ಪಿಡಬ್ಲ್ಯೂಡಿ ಇಲಾಖೆ ಸದರಿ ಗುಂಡಿ ಮುಚ್ಚಲು ಕ್ರಮಕೈಗೊಳ್ಳಬೇಕಾಗಿದೆ.

ಹಾಗೆಯೇ ಸದರಿ ಫ್ಲೈ ಓವರ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚುತ್ತಿದೆ. ಕೆಲ ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದಾರೆ. ಈ ಕಾರಣದಿಂದ ವಾಹನಗಳ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಮಾಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

Shivamogga, May 29: Citizens have complained that a pothole on the Kashipur Railway Overpass Road in Shivamogga city has become dangerous for motorists. For the past several days, a pothole has formed on the road, hindering smooth vehicular movement. It is especially dangerous for two-wheeler riders. Locals said that minor accidents are occurring due to the said pothole.

Shimoga : Power outage at various places on July 17 ಶಿವಮೊಗ್ಗ : ಜುಲೈ 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Previous post shimoga | ಶಿವಮೊಗ್ಗ : ವಿನೋಬನಗರ 60 ಅಡಿ ರಸ್ತೆ ಸುತ್ತಮುತ್ತ ಮೇ 30 ರಂದು ವಿದ್ಯುತ್ ವ್ಯತ್ಯಯ!
shimoga | Shivamogga: The corporation has finally moved forward with the construction of a well-equipped city bus stand! shimoga | ಶಿವಮೊಗ್ಗ : ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೊನೆಗೂ ಮುಂದಾದ ಪಾಲಿಕೆ! Next post shimoga | ಶಿವಮೊಗ್ಗ : ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೊನೆಗೂ ಮುಂದಾದ ಪಾಲಿಕೆ!