shimoga | Shivamogga: The corporation has finally moved forward with the construction of a well-equipped city bus stand! shimoga | ಶಿವಮೊಗ್ಗ : ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೊನೆಗೂ ಮುಂದಾದ ಪಾಲಿಕೆ!

shimoga | ಶಿವಮೊಗ್ಗ : ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೊನೆಗೂ ಮುಂದಾದ ಪಾಲಿಕೆ!

ಶಿವಮೊಗ್ಗ (shivamogga), ಮೇ 29: ಶಿವಮೊಗ್ಗ ನಗರದ ಖಾಸಗಿ ಹಾಗೂ ಕೆಎಸ್ಆರ್’ಟಿಸಿ ಬಸ್ ನಿಲ್ದಾಣಗಳಿರುವ ಅಶೋಕ ಸರ್ಕಲ್  ಸಮೀಪದಲ್ಲಿಯೇ, ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ನಾಗರೀಕರ ಬಹುದಿನಗಳ ಬೇಡಿಕೆ ಕಾರ್ಯಗತಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ!

ಈಗಾಗಲೇ ಪಾಲಿಕೆ ಆಡಳಿತ ಖಾಸಗಿ ಬಸ್ ನಿಲ್ದಾಣ ಸಮೀಪದಲ್ಲಿರುವ, ತನ್ನ ಒಡೆತನಕ್ಕೆ ಸೇರಿದ ಜಾಗದಲ್ಲಿ ಪ್ರತ್ಯೇಕ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದಪಡಿಸಿದೆ. ಇಷ್ಟರಲ್ಲಿಯೇ ಬಸ್ ಶೆಲ್ಟರ್ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಂದ ಶಿಲಾನ್ಯಾಸ ನೆರವೇರಿಸಲು ಮುಂದಾಗಿದೆ.

ಈ ಕುರಿತಂತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ‘ಪಾಲಿಕೆಗೆ ಸೇರಿದ ಜಾಗದಲ್ಲಿ ಸುಸಜ್ಜಿತ ಸಿಟಿ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇಷ್ಟರಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಂದ ಶಿಲಾನ್ಯಾಸ ನೆರವೇರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಲೆ ಬಾಳುವ ಪ್ರದೇಶ : ಖಾಸಗಿ ಬಸ್ ನಿಲ್ದಾಣ ಎದುರಿನ ಬಹುಕೋಟಿ ರೂ. ಮೌಲ್ಯದ 2 ಎಕರೆ 16 ಗುಂಟೆ ಜಾಗದ ಒಡೆತನಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಡಳಿತ ಹಾಗೂ ಖಾಸಗಿ ವ್ಯಕ್ತಿಗಳ ನಡುವೆ ವಿವಾದವಿತ್ತು. ಇತ್ತೀಚೆಗೆ ಸದರಿ ಜಾಗವು ಪಾಲಿಕೆ ಆಡಳಿತಕ್ಕೆ ಸೇರಿದ್ದೆಂದು ನ್ಯಾಯಾಲಯ ತೀರ್ಪು ನೀಡಿತ್ತು.

ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ, ಪಾಲಿಕೆ ಆಡಳಿತವು ಸದರಿ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಂಡು ನಾಮಫಲಕ ಅಳವಡಿಸಿತ್ತು. ಈ ನಡುವೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪರವರು, ಸದರಿ ಜಾಗದಲ್ಲಿ ಈ ಹಿಂದಿನ ನಿರ್ಧಾರದಂತೆ ಸಿಟಿ ಬಸ್ ನಿಲ್ದಾಣ ಸ್ಥಾಪನೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.

ಅನುಕೂಲ : ಅಶೋಕ ಸರ್ಕಲ್ ಸಮೀಪದಲ್ಲಿಯೇ ಖಾಸಗಿ ಹಾಗೂ ಕೆಎಸ್ಆರ್’ಟಿಸಿ ಬಸ್ ನಿಲ್ದಾಣಗಳಿವೆ. ಸದರಿ ವೃತ್ತಕ್ಕೆ ಸಮೀಪದಲ್ಲಿಯೇ ಇರುವ ಪಾಲಿಕೆ ಸುಪರ್ದಿಗೆ ಬಂದಿರುವ ಜಾಗದಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಿಸುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

Shivamogga, May 29: The long-standing demand of the citizens to build a city bus stand near Ashoka Circle, the private and KSRTC bus stands in Shivamogga city, is showing signs of being implemented! The corporation administration has already prepared a blueprint for the construction of a separate city bus stand on the land belonging to the corporation opposite the private bus stand. Meanwhile, the foundation stone for the construction of a bus shelter is to be laid by the district in-charge minister Madhu Bangarappa.

*** ‘ಶಿವಮೊಗ್ಗದ ತುಂಗಾ ರೈಸ್ ಮಿಲ್ ನ 2 ಎಕರೆ 16 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ, ಸ್ಥಳೀಯ ನ್ಯಾಯಾಲಯದಲ್ಲಿ ಪಾಲಿಕೆ ಪರವಾಗಿ ಆದೇಶ ಬಂದಿದೆ. ಈಗಾಗಲೇ ಪಾಲಿಕೆಯನ್ನು ಪಾಲಿಕೆ ಸುರ್ಪದಿಗೆ ಪಡೆಯಲಾಗಿದೆ. ಸದರಿ ಜಾಗದಲ್ಲಿ ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಲಾನ್ಯಾಸ ನೆರವೇರಿಸಲು ಇಷ್ಟರಲ್ಲಿಯೇ ದಿನಾಂಕ ನಿರ್ಧರಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ (Commissioner Kavita Yogappanavar) ಅವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

*** ಶಿವಮೊಗ್ಗ ನಗರಕ್ಕೆ ಜೆನ್ ನರ್ಮ್ ಯೋಜನೆಯಡಿ 65 ಸರ್ಕಾರಿ ಸಿಟಿ ಬಸ್ ಗಳು ಮಂಜೂರಾಗಿದ್ದವು. ಪ್ರತ್ಯೇಕ ಸಿಟಿ ಬಸ್ ಶೆಲ್ಟರ್, ವರ್ಕ್ ಶಾಪ್ ನಿರ್ಮಾಣಕ್ಕೂ ಕೆಎಸ್ಆರ್’ಟಿಸಿ ಗೆ ಅನುದಾನ ಬಿಡುಗಡೆಯಾಗಿತ್ತು. 206-17 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ, ಅಂದು ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ಶಿವಮೊಗ್ಗದಲ್ಲಿ ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ ಕಾಲಕ್ರಮೇಣ ನಗರದ ವಿವಿಧೆಡೆ ಸಂಚರಿಸುತ್ತಿದ್ದ ಸರ್ಕಾರಿ ಸಿಟಿ ಬಸ್ ಗಳ ಸಂಚಾರವನ್ನು ಕೆಎಸ್ ಆರ್’ಟಿಸಿ ಸ್ಥಗಿತಗೊಳಿಸಿತ್ತು. ತದನಂತರ ಪ್ರತ್ಯೇಕ ಸರ್ಕಾರಿ ಸಿಟಿ ಬಸ್ ಶೆಲ್ಟರ್ ಹಾಗೂ ವರ್ಕ್ ಶಾಪ್ ನಿರ್ಮಾಣದತ್ತಲೂ ಗಮನಹರಿಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಅವರು ಇತ್ತ ಗಮನಹರಿಸಬೇಕು. ಸರ್ಕಾರಿ ಸಿಟಿ ಬಸ್ ಗಳ ಸಂಚಾರದತ್ತ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.

Pothole hazard on Shivamogga - Flyover road: Is PWD paying attention? ಶಿವಮೊಗ್ಗ - ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ ಗಂಡಾಂತರ : ಗಮನಹರಿಸುವುದೆ ಪಿಡಬ್ಲ್ಯೂಡಿ? Previous post shimoga | ಶಿವಮೊಗ್ಗ – ಕಾಶೀಪುರ ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ ಗಂಡಾಂತರ : ಗಮನಿಸುವುದೆ ಪಿಡಬ್ಲ್ಯೂಡಿ?
A female officer welcomed school children by distributing roses - educational materials and sweets shimoga | ಶಿವಮೊಗ್ಗ | ಗುಲಾಬಿ ಹೂವು - ಶೈಕ್ಷಣಿಕ ಸಾಮಗ್ರಿ - ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಸ್ವಾಗತ ಕೋರಿದ ಮಹಿಳಾ ಅಧಿಕಾರಿ Next post shimoga | ಶಿವಮೊಗ್ಗ | ಗುಲಾಬಿ ಹೂವು, ಶೈಕ್ಷಣಿಕ ಸಾಮಗ್ರಿ, ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಸ್ವಾಗತ ಕೋರಿದ ಮಹಿಳಾ ಅಧಿಕಾರಿ