
shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ : ನಿರ್ಣಯ ಅಂಗೀಕಾರಕ್ಕೆ ಬಡಾವಣೆಗಳ ನಿವಾಸಿಗಳಿಂದ ಮನವಿ
ಶಿವಮೊಗ್ಗ (shivamogga), ಜೂ. 1: ಮಹಾನಗರ ಪಾಲಿಕೆ ವ್ಯಾಪ್ತಿಗೆ ಗ್ರಾಮ ಪಂಚಾಯ್ತಿ ಅಧೀನದ ಅಭಿವೃದ್ದಿ ಹೊಂದಿದ ಬಡಾವಣೆಗಳ ಸೇರ್ಪಡೆಗೆ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಮೇ 31 ರಂದು ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯ ಬಿ ಹೊಸಟ್ಟಿ ಹಾಗೂ ಪಿಡಿಓ ರಾಜಪ್ಪ ಅವರಿಗೆ ವಿವಿಧ ಬಡಾವಣೆ ನಿವಾಸಿಗಳು ಮನವಿ ಪತ್ರ ಅರ್ಪಿಸಿದರು.
ಬಸವನಗಂಗೂರು ಗ್ರಾಮ ವ್ಯಾಪ್ತಿಯ ಕೆ ಹೆಚ್ ಬಿ ಪ್ರೆಸ್ ಕಾಲೋನಿ, ಶ್ರೀ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ ಹಾಗೂ ಶಂಕರಚಾರ್ಯ ಬಡಾವಣೆಗಳು ನಗರ ವ್ಯಾಪ್ತಿಯ ಸಮೀಪದಲ್ಲಿವೆ. ಪಾಲಿಕೆ ಪ್ರದೇಶಗಳಿಗೆ ಹೊಂದಿಕೊಂಡಂತಿವೆ.
ಆದರೆ ಪಾಲಿಕೆ ಆಡಳಿತ ಸಿದ್ದಪಡಿಸಿರುವ ವರದಿಯಲ್ಲಿ, ಬಸವನಗಂಗೂರು ಗ್ರಾಮ ವ್ಯಾಪ್ತಿಯ ಮೇಲ್ಕಂಡ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಮನವಿ ಪತ್ರದಲ್ಲಿ ನಿವಾಸಿಗಳು ತಿಳಿಸಿದ್ದಾರೆ.
ಅಬ್ಬಲಗೆರೆ ಗ್ರಾಮ ಪಂಚಾಯ್ತಿಯು ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಪಂ ಆಗಿದೆ. ಆಡಳಿತದಿಂದ ಬಡಾವಣೆಗಳ ಪರಿಣಾಮಕಾರಿ ನಿರ್ವಹಣೆ ದುಸ್ತರವಾಗುತ್ತಿದೆ. ಈ ಕಾರಣದಿಂದ ಸದರಿ ಬಡಾವಣೆಗಳನ್ನು, ಪಾಲಿಕೆ ಆಡಳಿತಕ್ಕೆ ಸೇರ್ಪಡೆಗೊಳಿಸುವ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ನಂತರ ಅಧ್ಯಕ್ಷೆ ಭಾಗಮ್ಮ ಹೊಸಟ್ಟಿ ಹಾಗೂ ಪಿಡಿಓ ರಾಜಪ್ಪ ಅವರು ಮಾತನಾಡಿ, ‘ಈ ಕುರಿತಂತೆ ಗ್ರಾಮ ಪಂಚಾಯ್ತಿಯ ವಿಶೇಷ ಸಭೆ ಕರೆಯಲಾಗುವುದು. ಸದರಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ’ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹರ್ಷ ಭೋವಿ, ಗ್ರೇಡ್ – 1 ಕಾರ್ಯದರ್ಶಿ ಶಿವಾನಾಯ್ಕ್, ಸಿಬ್ಬಂದಿಗಳಾದ ವಸಂತನಾಯ್ಕ್, ಸಂದೀಪ್, ವಿವಿಧ ಬಡಾವಣೆ ನಿವಾಸಿಗಳಾದ ಪತ್ರಕರ್ತ ಬಿ. ರೇಣುಕೇಶ್, ಗುರುಚರಣ್, ಸುನೀಲ್, ಶ್ರೀಧರ್, ಉದಯ ಕುಮಾರ್ ಸೇರಿದಂತೆ ಮೊದಲಾದವರಿದ್ದರು.
Shivamogga, June 1: Residents of various settlements submitted a petition to Abbalagere Gram Panchayat President Bhagya B Hosatti and PDO Rajappa on May 31, demanding that a decision be taken to include the developed settlements under the Gram Panchayat under the jurisdiction of the Municipal Corporation.
KHB Press Colony, Sri Layout, Mahalaxmi Layout and Shankaracharya Layout in Basavanagangur village limits are close to the city limits. They are adjacent to the municipal areas.