Shimoga: Kashipura flyover road pothole danger is finally freed! ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ರಸ್ತೆ ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ!

shimoga | ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ರಸ್ತೆ ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ!

ಶಿವಮೊಗ್ಗ (shivamogga), ಜೂ. 1 : ಶಿವಮೊಗ್ಗ ನಗರದ ಕಾಶೀಪುರ ಫ್ಲೈ ಓವರ್ ರಸ್ತೆಯಲ್ಲಿ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಗುಂಡಿ ಗಂಡಾಂತರಕ್ಕೆ, ಕೊನೆಗೂ ಮುಕ್ತಿ ಕಲ್ಪಿಸಲಾಗಿದೆ!

ಕಳೆದ ಕೆಲ ತಿಂಗಳುಗಳಿಂದ ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ  ಬಿದ್ದಿತ್ತು. ದ್ವಿ ಚಕ್ರ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಕೆಲ ವಾಹನ ಸವಾರರು ಗುಂಡಿ ಗಮನಿಸದೆ ಬಿದ್ದು ಗಾಯಗೊಂಡಿದ್ದರು.

ಆದರೆ ಸಂಬಂಧಿಸಿದವರು ಗುಂಡಿ ಮುಚ್ಚಲು ಕ್ರಮಕೈಗೊಂಡಿರಲಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದರು. ಈ ಕುರಿತಂತೆ ‘ಉದಯ ಸಾಕ್ಷಿ’ www.udayasaakshi.com ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್  ಚಾನಲ್ ನಲ್ಲಿ 29/5/2025 ರಂದು ವರದಿ ಬಿತ್ತರಿಸಲಾಗಿತ್ತು.

ವರದಿ ಪ್ರಕಟಗೊಂಡ ಬೆನ್ನಲ್ಲೆ, ಫ್ಲೈ ಓವರ್ ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಗುಂಡಿಯನ್ನು ವೆಟ್ ಮಿಕ್ಸ್ ಹಾಕಿ ಮುಚ್ಚಲಾಗಿದೆ. ಇದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಎದುರಾಗಿದ್ದ ಕಂಟಕಕ್ಕೆ ಮುಕ್ತಿ ಸಿಕ್ಕಿದೆ ಎಂದು ಸ್ಥಳೀಯ ನಾಗರೀಕರು ಮಾಹಿತಿ ನೀಡಿದ್ದಾರೆ.

Shivamogga, June 1: The pothole hazard that had become a danger for motorists on the Kashipura Flyover Road in Shivamogga city has finally been resolved!

For the past few months, a pothole had formed on the flyover road. It had become dangerous for two-wheeler riders. Some riders had fallen and got injured without noticing the pothole.

But the concerned authorities did not take any steps to close the well. They were completely negligent. ‘Udaya Sakshi’ had published a report on this on the news website www.udayasaakshi.com and the YouTube news channel @UdayaSaakshi .

Shivamogga Municipal Corporation jurisdiction: Appeal from residents of the settlements for approval of the resolution ಶಿವಮೊಗ್ಗ ಪಾಲಿಕೆ ವ್ಯಾಪ್ತಿ : ನಿರ್ಣಯ ಅಂಗೀಕಾರಕ್ಕೆ ಬಡಾವಣೆಗಳ ನಿವಾಸಿಗಳಿಂದ ಮನವಿ Previous post shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ : ನಿರ್ಣಯ ಅಂಗೀಕಾರಕ್ಕೆ ಬಡಾವಣೆಗಳ ನಿವಾಸಿಗಳಿಂದ ಮನವಿ
shimoga | Shivamogga: Drinking water is being wasted - is the water board not paying attention? shimoga | ಶಿವಮೊಗ್ಗ : ವ್ಯರ್ಥವಾಗುತ್ತಿದೆ ಕುಡಿಯುವ ನೀರು - ಗಮನಿಸುವುದೆ ಜಲ ಮಂಡಳಿ?a Next post shimoga | ಶಿವಮೊಗ್ಗ : ಕುಡಿಯುವ ನೀರು ವ್ಯರ್ಥದ ಜೊತೆ ಬಿದ್ದಿದೆ ಗುಂಡಿ – ಗಮನಿಸುವುದೆ ಜಲ ಮಂಡಳಿ?